ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(27-12-2022)

Social Share

ನಿತ್ಯ ನೀತಿ : ಇತರರಿಗಾಗಿ ಯಾರು ಮರುಗುತ್ತಾರೋ ಅವರೇ ನಿಜವಾಗಿ ಬದುಕಿರುವವರು. ಉಳಿದವರು ಬದುಕಿದ್ದೂ ಸತ್ತಂತೆ.

ಪಂಚಾಂಗ ಮಂಗಳವಾರ 27-12-2022
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಧನಿಷ್ಠಾ / ಮಳೆ ನಕ್ಷತ್ರ: ಮೂಲಾ

ಸೂರ್ಯೋದಯ : ಬೆ.06.40
ಸೂರ್ಯಾಸ್ತ : 06.02
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ಸಭೆ-ಸಮಾರಂಭಗಳಲ್ಲಿ ಮುಂದಾಳತ್ವ ವಹಿಸಿ ಕೀರ್ತಿ-ಗೌರವ ಸಂಪಾದಿಸುವಿರಿ.
ವೃಷಭ: ಮಾತಿನಿಂದ ಕಾರ್ಯ ಸಾಧಿಸುವ ನಿಮ್ಮ ಗುಣದಿಂದ ಅನುಕೂಲಕರ ವಾತಾವರಣ ನಿರ್ಮಾಣವಾಗುವುದು.
ಮಿಥುನ: ಅಕ್ಕಪಕ್ಕದವರೊಂದಿಗೆ ಸಂಯಮದಿಂದ ನಡೆದುಕೊಳ್ಳಿ. ನಾನಾ ರೀತಿಯಲ್ಲಿ ಹಣ ಕೈ ಸೇರಲಿದೆ.

ಕಟಕ: ರಫ್ತು ಮಾರಾಟದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಎದುರಾದರೂ ಆದಾಯಕ್ಕೆ ತೊಂದರೆಯಿಲ್ಲ.
ಸಿಂಹ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರೆಯಲಿದೆ.
ಕನ್ಯಾ: ನಿಮ್ಮ ವ್ಯವಹಾರಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಅಭಿವೃದ್ಧಿ ಸಾಧಿಸುವಿರಿ.

ತುಲಾ: ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿ ಕಾಣುವಿರಿ.
ವೃಶ್ಚಿಕ: ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಧನುಸ್ಸು: ವ್ಯಾವಹಾರಿಕ ಜೀವನದ ಕೆಲವು ಮುಖ್ಯವಾದ ನಿರ್ಧಾರಗಳನ್ನು ಕೈಗೊಳ್ಳುವಿರಿ.

ಮಕರ: ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ಆರೋಗ್ಯದಲ್ಲಿ ಏರುಪೇರಾಗಲಿದೆ.
ಕುಂಭ: ನೀವು ಮಾಡುವ ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ. ಅನಿರೀಕ್ಷಿತ ಧನಲಾಭವಾಗಲಿದೆ.
ಮೀನ: ಒಡಹುಟ್ಟಿದವರಲ್ಲಿ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಿ. ದೂರ ಪ್ರಯಾಣ ಮಾಡುವುದು ಬೇಡ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article