ನಿತ್ಯ ನೀತಿ : ಮೊದಲು ಆಳಾಗುವುದನ್ನು ಕಲಿಯಿರಿ. ಆಗ ನಾಯಕನ ಅರ್ಹತೆ ತಾನಾಗಿಯೇ ಬರುತ್ತದೆ.
ಪಂಚಾಂಗ ಶನಿವಾರ 28-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಅಶ್ವಿನಿ / ಯೋಗ: ಸಾಧ್ಯ / ಕರಣ: ವಿಷ್ಟಿ
ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.19
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಮೇಲಧಿಕಾರಿಗಳು ತೊಂದರೆ ಕೊಡುವುದ ರಿಂದ ಮಾನಸಿಕ ವೇದನೆ ಅನುಭವಿಸುವಿರಿ.
ವೃಷಭ: ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಸಾಲ ಮಾಡುವ ಸಂದರ್ಭ ಎದುರಾಗಬಹುದು.
ಮಿಥುನ: ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಆರೋಗ್ಯ ಸಮಸ್ಯೆ ಕಾಡುವುದು.
ಕಟಕ: ಸಂಗಾತಿಯ ನಡವಳಿಕೆಯಿಂದ ಬೇಸರವಾಗುವುದು. ಪಾಲುದಾರಿಕೆಯಲ್ಲಿ ನಷ್ಟ.
ಸಿಂಹ: ಕಣ್ಣಿನ ದೃಷ್ಟಿ ಯಲ್ಲಿ ಬದಲಾವಣೆಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.
ಕನ್ಯಾ: ಯಾರನ್ನಾದರೂ ನಂಬಿ ಹಣ ಹೂಡುವ ಮುನ್ನ ಯೋಚಿಸಿ.
ತುಲಾ: ದೀರ್ಘಕಾಲದ ಸಮಸ್ಯೆ ಗಳಿಂದ ಮುಕ್ತಿ ಸಿಗಲಿದೆ. ಮಕ್ಕಳಿಂದ ಅನುಕೂಲ.
ವೃಶ್ಚಿಕ: ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಿ. ಪ್ರಯಾಣದಲ್ಲಿ ಕಿರಿಕಿರಿ ಉಂಟಾಗಲಿದೆ.
ಧನುಸ್ಸು: ನೀವು ಮಾಡುವ ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ.
ಮಕರ: ಸಮೀಪವರ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಎಚ್ಚರ ವಹಿಸಿ.
ಕುಂಭ: ಸಾಲಬಾಧೆಯಿರುವ ಪರಿಸ್ಥಿತಿಯಲ್ಲಿ ಸಹೋದರರು ಸಹಕರಿಸುವರು.
ಮೀನ: ಉನ್ನತ ಅಧಿಕಾರ ದೊರೆಯಲಿದೆ. ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,