ನಿತ್ಯ ನೀತಿ : ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ. ಆಗ ಎಲ್ಲವೂ ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ.
ಪಂಚಾಂಗ ಮಂಗಳವಾರ 28-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ರೋಹಿಣಿ / ಯೋಗ: ವಿಷ್ಕಂಭ / ಕರಣ: ಬಾಲವ
ಸೂರ್ಯೋದಯ : ಬೆ.06.36
ಸೂರ್ಯಾಸ್ತ : 06.28
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30
ರಾಶಿ ಭವಿಷ್ಯ
ಮೇಷ: ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ.
ವೃಷಭ: ಕೆಲಸದ ಸಂಬಂಧ ದೂರ ಪ್ರಯಾಣ ಮಾಡುವಿರಿ. ವ್ಯವಹಾರದಲ್ಲಿ ಹೊಸ ಒಪ್ಪಂದಗಳಾಗಲಿವೆ.
ಮಿಥುನ: ಯುವಕರಿಗೆ ಬಯಸಿದ ಜೀವನ ಸಂಗಾತಿ ಸಿಗುವುದರಿಂದ ಸಂತೋಷವಾಗುತ್ತದೆ.
ಕಟಕ: ಹೊಸ ಮನೆ ಕೊಳ್ಳುವ ಬಗ್ಗೆ ಮಧ್ಯವರ್ತಿಗಳೊಂದಿಗೆ ಮಾತುಕತೆ ನಡೆಸುವಿರಿ.
ಸಿಂಹ: ಸಣ್ಣ ತಪ್ಪುಗಳಾಗ ಬಹುದು. ಇದರಿಂದ ಆರ್ಥಿಕ ವಾಗಿ ಹೆಚ್ಚು ಲಾಭ ಗಳಿಸಲು ಶ್ರಮ ಪಡಬೇಕಾದೀತು.
ಕನ್ಯಾ: ಕುಟುಂಬದ ಸದಸ್ಯರಿಂದ ಒಳ್ಳೆಯ ಸುದ್ದಿ ಕೇಳುವಿರಿ. ಅತ್ತಿಗೆ ಕಡೆಯಿಂದ ಲಾಭವಾಗಲಿದೆ.
ತುಲಾ: ಸಹೋದ್ಯೋಗಿಗಳು ಗೌರವಾನ್ವಿತವಾಗಿ ವರ್ತಿಸುವುದರಿಮದ ಕೆಲಸ ಸರಾಗವಾಗಿ ಸಾಗಲಿದೆ.
ವೃಶ್ಚಿಕ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ.
ಧನುಸ್ಸು: ಸ್ನೇಹಿತರು,ಕುಟುಂಬದವರ ಸಲಹೆ ಮೇರೆಗೆ ಕೆಲವು ಉತ್ತಮ ಬದಲಾವಣೆಗಳಾಗಿವೆ.
ಮಕರ: ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು.
ಕುಂಭ: ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ಕೈಬಿಡಿ.
ಮೀನ: ತಂದೆ ಆರೋಗ್ಯ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ.
DailyHoroscope, #Horoscope, #KannadaHoroscope,
#TodayHoroscope, #ರಾಶಿಭವಿಷ್ಯ,