ನಿತ್ಯ ನೀತಿ: ಯಾವ ರಾಜ ಅಧರ್ಮದ ದಾರಿಯಲ್ಲಿ ಸಾಗುತ್ತಾನೋ ಅವನಿಗೆ ತನ್ನ ಪ್ರಜೆಗಳ ಸುಖ-ದುಃಖಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ಅವನು ತನ್ನ ಸ್ವಾರ್ಥದಿಂದಲೇ ಸರ್ವನಾಶವಾಗುತ್ತಾನೆ. ಅದೇ ರೀತಿ ತನ್ನ ಸಮಾಜದ ಹಿತ ಕಾಯದ ವ್ಯಕ್ತಿ ಹೀನಾಯವಾಗಿ ಅಳಿಯುತ್ತಾನೆ.
ಗುರುವಾರ ಪಂಚಾಂಗ 28-07-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ /ತಿಥಿ: ಅಮಾವಾಸ್ಯೆ /ನಕ್ಷತ್ರ: ಪುನರ್ವಸು /ಮಳೆ ನಕ್ಷತ್ರ: ಪುಷ್ಯ
ಸೂರ್ಯೋದಯ; ಬೆ.06.04
ಸೂರ್ಯಾಸ್ತ: 06.48
ರಾಹುಕಾಲ; 1.30-3.00
ಯಮಗಂಡ ಕಾಲ; 6.00-7.30
ಗುಳಿಕ ಕಾಲ; 9.00-10.30
ರಾಶಿ ಭವಿಷ್ಯ
ಮೇಷ: ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ಅದು ದೊರೆಯಲಿದೆ. ಹಣದ ಹರಿವು ಉತ್ತಮವಾಗಿರಲಿದೆ.
ವೃಷಭ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ ಮತ್ತು ಅದರಲ್ಲಿ ನೀವು ಯಶಸ್ಸು ಸಾಧಿಸುವಿರಿ.
ಮಿಥುನ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.
ಕಟಕ: ವಿದೇಶಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿ ಸುತ್ತಿದ್ದವರಿಗೆ ಅದರಲ್ಲಿ ಯಶಸ್ಸು ಸಿಗಲಿದೆ.
ಸಿಂಹ: ಯಾವುದೇ ಕೆಲಸ ಮಾಡಬೇಕಾದರೂ ಎಚ್ಚರಿಕೆಯಿಂದ ಮಾಡುವುದು ಸೂಕ್ತ.
ಕನ್ಯಾ: ಅತಿಯಾದ ಆತ್ಮವಿಶ್ವಾಸ ಬೇಡ. ವೃತ್ತಿ ಜೀವನದಲ್ಲಿ ಸವಾಲುಗಳು ಎದುರಾಗುತ್ತವೆ.
ತುಲಾ: ತಾಯಿ ಕಡೆಯಿಂದ ಒಡವೆ ಬರುವ ಅಥವಾ ಸೋದರ ಮಾವ ಒಡವೆ ಮಾಡಿಸಿಕೊಡುವ ಸಾಧ್ಯತೆಗಳು ಹೆಚ್ಚಾಗಿವೆ.
ವೃಶ್ಚಿಕ: ಇತರರಿಗೆ ಮುಜುಗರ ಉಂಟುಮಾಡದಿರಿ. ಮತ್ತು ಕುಟುಂಬದ ಅವಶ್ಯಕತೆಗಳಿಗೆ ಗಮನ ಕೊಡಿ.
ಧನುಸ್ಸು: ಮುಂದೆ ಯಾವಾಗಲೋ ಹಣ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಸಾಲ ಮಾಡದಿರಿ.
ಮಕರ: ಹಣಕಾಸು ಸಮಸ್ಯೆಯಿದ್ದರೂ ಹೇಗಾದರೂ ಹಣ ಹೊಂದಾಣಿಕೆಯಾಗುತ್ತದೆ.
ಕುಂಭ: ಮಸಾಲೆ, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳಿಂದ ದೂರವಿರುವುದು ಒಳಿತು.
ಮೀನ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.