ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-08-2022)

Social Share

ನಿತ್ಯ ನೀತಿ : ಅನಗತ್ಯವಾದ ಒಡನಾಟ ಯಾರೊಂದಿಗೂ ಒಳ್ಳೆಯದಲ್ಲ. ಏಕೆಂದರೆ ಅವರ ಸ್ವಭಾವಕ್ಕೆ ತಕ್ಕ ಹಾಗೆ ನಾವಿಲ್ಲದಿದ್ದರೆ ನಮ್ಮನ್ನು ಕೆಟ್ಟವರೆಂದು ಭಾವಿಸುತ್ತಾರೆ.

ಪಂಚಾಂಗ ಭಾನುವಾರ 28-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ /ವರ್ಷ ಋತು /ಭಾದ್ರಪದ ಮಾಸ /ಶುಕ್ಲ ಪಕ್ಷ /ತಿಥಿ: ಪ್ರತಿಪದ್ /ನಕ್ಷತ್ರ: ಪೂರ್ವಾಭಾದ್ರ /ಮಳೆ ನಕ್ಷತ್ರ: ಮಖಾ
ಸೂರ್ಯೋದಯ: ಬೆ.06.08
ಸೂರ್ಯಾಸ್ತ: 06.33
ರಾಹುಕಾಲ: 4.30-6.00
ಯಮಗಂಡ ಕಾಲ: 12.00-1.30
ಗುಳಿಕ ಕಾಲ ; 3.00-4.30

ರಾಶಿ ಭವಿಷ್ಯ
ಮೇಷ: ಚಿನ್ನ, ಬೆಳ್ಳಿ ಮತ್ತು ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಅಧಿಕ ಲಾಭವಿದೆ.
ವೃಷಭ: ನಿಮಗೆ ಸಿಗುವ ಸುವರ್ಣಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಗಮನ ಹರಿಸಿ.
ಮಿಥುನ: ಮಕ್ಕಳೊಂದಿಗೆ ಮನರಂಜನೆ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಮಯ ಕಳೆಯುವಿರಿ.

ಕಟಕ: ಹಣಕಾಸಿನ ಜವಾಬ್ದಾರಿ ತೆಗೆದುಕೊಂಡು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಿರಿ.
ಸಿಂಹ: ನೇರ ನಡೆ-ನುಡಿ ಇರುವವರೊಂದಿಗೆ ವ್ಯವಹಾರ ಮುಂದುವರಿಸಿ.
ಕನ್ಯಾ: ಅನಗತ್ಯ ವಿಚಾರಗಳ ಬಗ್ಗೆ ಮಾತನಾಡುವುದಾಗಲಿ, ಸಮಯ ಕಳೆಯುವುದಾಗಲಿ ಸರಿಯಲ್ಲ.

ತುಲಾ: ದುಡುಕು ಸ್ವಭಾವದಿಂದಾಗಿ ಅಣ್ಣ- ತಮ್ಮಂದಿರ ಬಾಂಧವ್ಯಕ್ಕೆ ಹಾನಿಯಾಗಬಹುದು.
ವೃಶ್ಚಿಕ: ಹೊಸ ಉದ್ಯಮ ಪ್ರಾರಂಭಿಸಲು ಆಲೋಚನೆಗಳು ಬರಲಿವೆ. ಬಹಳ ಒಳ್ಳೆಯ ದಿನ.
ಧನುಸ್ಸು: ಎಲ್ಲ ಕಿರಿಕಿರಿ, ತೊಂದರೆ-ತಾಪತ್ರಯ ಗಳನ್ನು ಶಾಂತ ರೀತಿಯಲ್ಲಿ ಎದುರಿಸಲು ಪ್ರಯತ್ನಿಸಿ.

ಮಕರ: ರಾಜಕೀಯಕ್ಕೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ವಾತಾವರಣ ಏರ್ಪಡಲಿದೆ.
ಕುಂಭ: ಬಹಳ ದಿನಗಳ ನಂತರ ಮನಸ್ಸಿಗೆ ಹಿತವಾಗುವಂತಹ ಘಟನೆಗಳು ನಡೆಯಲಿವೆ.
ಮೀನ: ಕೆಲಸ-ಕಾರ್ಯಗಳ ಬಗ್ಗೆ ಸಹೋದ್ಯೋಗಿ ಗಳೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಿ.

Articles You Might Like

Share This Article