ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-09-2022)

Social Share

ನಿತ್ಯ ನೀತಿ: ಮರ ದೊಡ್ಡದಾದರೂ ಎಂದೂ ತನ್ನ ಬೇರಿನಿಂದ ದೂರಾಗದು. ಹಾಗೆಯೇ ನಾವು ಸಹ ನಮ್ಮ ಹಿರಿಯರ ನೆನೆಯುತ್ತಿರಬೇಕು. ಅವರ ಹಾರೈಕೆಯೇ ನಮ್ಮ ಶ್ರೀರಕ್ಷೆ.

ಪಂಚಾಂಗ ಬುಧವಾರ 28-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು /ಆಶ್ವಯುಜ ಮಾಸ / ಶುಕ್ಲ ಪಕ್ಷ /ತಿಥಿ: ತೃತೀಯಾ /ನಕ್ಷತ್ರ: ಚಿತ್ತಾ / ಮಳೆ ನಕ್ಷತ್ರ: ಹಸ್ತ
ರಾಹುಕಾಲ :12.00-1.30
ಯಮಗಂಡ ಕಾಲ: 7.30-9.00
ಗುಳಿಕ ಕಾಲ: 10.30-12.00

ರಾಶಿ ಭವಿಷ್ಯ
ಮೇಷ
: ಆರೋಗ್ಯ ಹದಗೆಡುವುದರಿಂದ ಮನಸ್ಸಿನಲ್ಲಿ ಚಡಪಡಿಕೆ ಉಂಟಾಗುತ್ತದೆ.
ವೃಷಭ: ಕೋಪವು ನಿಮ್ಮನ್ನು ಆವರಿಸಲು ಬಿಡಬೇಡಿ. ಹಣವನ್ನು ಸರಿಯಾದ ಕೆಲಸಗಳಿಗೆ ಖರ್ಚು ಮಾಡಿ.
ಮಿಥುನ: ಸ್ಥಗಿತಗೊಂಡ ಕೆಲಸವನ್ನು ಪ್ರಾರಂಭಿಸಲು ಯಾರನ್ನಾದರೂ ಶಿಫಾರಸು ಮಾಡಬೇಕಾಗಬಹುದು.

ಕಟಕ: ಕೆಲಸದ ವಿಸ್ತರಣೆಗಾಗಿ ಸಾಲ ಪಡೆಯಬೇಕಾದ ಸಂದರ್ಭ ಬರಬಹುದು.
ಸಿಂಹ: ಕುಟುಂಬವನ್ನು ನೋಡಿಕೊಳ್ಳುತ್ತೀರಿ ಮತ್ತು ಅವರ ಅಗತ್ಯ ಗಳನ್ನು ಪೂರೈಸಲು ಪ್ರಯತ್ನಿಸುತ್ತೀರಿ.
ಕನ್ಯಾ: ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುವರು.

ತುಲಾ: ಹೂಡಿಕೆಗೆ ಸಂಬಂಧಿಸಿದ ಯಾವುದೇ ಯೋಜನೆಯನ್ನು ಮಾಡುತ್ತಿದ್ದರೆ ಶುಭವಾಗಲಿದೆ.
ವೃಶ್ಚಿಕ: ಮಾನಸಿಕ ಆಲಸ್ಯ ಕೊನೆಗೊಳ್ಳುತ್ತದೆ ಮತ್ತು ಎಲ್ಲಾ ಕಡೆಯಿಂದ ಒಳ್ಳೆಯ ಸುದ್ದಿ ಬರಲಿದೆ.
ಧನುಸ್ಸು: ಅಗತ್ಯ ವ್ಯವಹಾರಗಳ ಬಗ್ಗೆ ಜಾಗರೂಕ ರಾಗಿರಿ. ಈ ದಿನ ಸಾಮಾನ್ಯವಾಗಿರುತ್ತದೆ.

ಮಕರ: ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದ ಜನರು ಉತ್ತಮ ಯಶಸ್ಸು ಸಾಧಿಸುವರು.
ಕುಂಭ: ಆಹಾರ ಕ್ರಮದ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ.
ಮೀನ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ.

Articles You Might Like

Share This Article