ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-01-2023)

Social Share

ನಿತ್ಯ ನೀತಿ : ನಿನ್ನ ನೋಡಿ ನಗುವವರು ನಿನ್ನ ಹೊರಲು ಬರುವವರೇ! ನೀನೇಕೆ ಅವರ ಸತ್ತ ಮಾತುಗಳನ್ನು ತಲೆಯಲ್ಲಿ ಹೊತ್ತು ತಿರುಗುತ್ತಿರುವೆ?

ಪಂಚಾಂಗ ಭಾನುವಾರ 29-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಭರಣಿ / ಯೋಗ: ಶುಭ / ಕರಣ: ಬಾಲವ
ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.19
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.
ವೃಷಭ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ವಾಗಬಹುದು. ಮಾನಸಿಕ ನೋವು ಹೆಚ್ಚಾಗಲಿದೆ.
ಮಿಥುನ: ದಿನಸಿ ವ್ಯಾಪಾರಿಗಳಿಗೆ ಉತ್ತಮ ದಿನ. ಕುಟುಂಬದಲ್ಲಿ ಶಾಂತಿ, ಸಮಾಧಾನ ಇರುತ್ತದೆ.

ಕಟಕ: ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ.
ಸಿಂಹ: ದೂರದ ಸಂಬಂಧಿಕರಿಂದ ಅನುಕೂಲ ವಾಗಲಿದೆ. ಆರ್ಥಿಕವಾಗಿ ಬೆಳವಣಿಗೆ ಕಾಣುವಿರಿ.
ಕನ್ಯಾ: ಉದ್ಯೋಗದಲ್ಲಿ ನಷ್ಟ ಸಂಭವಿಸುವುದು. ದಾಂಪತ್ಯದಲ್ಲಿ ವಿರಸ.

ತುಲಾ: ರಾಜಕೀಯ ವ್ಯಕ್ತಿಗಳು ವೈಯಕ್ತಿಕ ಅನುಕೂಲಕ್ಕಾಗಿ ಹೆಚ್ಚು ಶ್ರಮ ಪಡುವರು.
ವೃಶ್ಚಿಕ: ದೂರ ಪ್ರಯಾಣ ಮಾಡಬೇಕಾಗಬಹುದು. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾಗಲಿದೆ
ಧನುಸ್ಸು: ಜಟಿಲ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಕ್ತ ಮಾರ್ಗದರ್ಶಕರನ್ನು ಹುಡುಕುವಿರಿ.

ಮಕರ: ಕಷ್ಟ ನಿವಾರಣೆಯಾಗುತ್ತದೆ. ದೇವರ ಕಾರ್ಯದಲ್ಲಿ ಭಾಗಿಯಾಗುವಿರಿ.
ಕುಂಭ: ಆದಾಯ ಮೀರಿ ಖರ್ಚು ಹೆಚ್ಚಾಗಿ ಕಂಡುಬರಲಿವೆ. ಗೃಹಿಣಿಯರಿಗೆ ಸಂಭ್ರಮದ ದಿನ.
ಮೀನ: ನಂಬಿಕೆ ದ್ರೋಹ ಆಗಬಹುದು. ಮನಸ್ಸಿನಲ್ಲಿ ಗೊಂದಲ ಉಂಟಾಗಲಿದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article