ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-07-2022)

Social Share

ನಿತ್ಯ ನೀತಿ: ಬದುಕನ್ನು ನಿಯಂತ್ರಿಸುವುದು ಮನಸ್ಸು. ಉತ್ತಮವಾಗಿ ಯೋಚಿಸುತ್ತಿದ್ದರೆ ಜೀವನ ಯಾವತ್ತೂ ಚೆನ್ನಾಗಿಯೇ ಇರುತ್ತದೆ. ನಕಾರಾತ್ಮಕ ಚಿಂತನೆಗಳನ್ನು ಹಿಮ್ಮೆಟ್ಟಿಸಿ ಒಳ್ಳೆಯದನ್ನೇ ಯೋಚಿಸುವುದನ್ನು ರೂಢಿಸಿಕೊಳ್ಳಿ.

ಶುಕ್ರವಾರ ಪಂಚಾಂಗ 29-07-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಪುಷ್ಯ
ಮಳೆ ನಕ್ಷತ್ರ: ಪುಷ್ಯ
ಸೂರ್ಯೋದಯ: ಬೆ.06.05
ಸೂರ್ಯಾಸ್ತ: 06.48
ರಾಹುಕಾಲ: 10.30-12.00
ಯಮಗಂಡ ಕಾಲ: 3.00-4.30
ಗುಳಿಕ ಕಾಲ ;7.30-9.00

ರಾಶಿ ಭವಿಷ್ಯ
ಮೇಷ: ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ಆರೋಗ್ಯದ ಕಡೆ ಗಮನ ಹರಿಸಿ.
ವೃಷಭ: ನೀವು ಹಿಂದೆ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಶತ್ರುಗಳ ಕಾಟ ತಪ್ಪಲಿದೆ.
ಮಿಥುನ: ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಿಂದ ಆರ್ಥಿಕ ಸಹಾಯ ಸಿಗಲಿದೆ.

ಕಟಕ: ದಾಂಪತ್ಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಸಿಂಹ: ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು, ಅದಕ್ಕೆ ಕಾರಣ ತಿಳಿದುಕೊಳ್ಳುವುದು ಕಷ್ಟವಾಗಲಿದೆ.
ಕನ್ಯಾ: ವ್ಯಾಪಾರಿಗಳಿಗೆ ಅನುಕೂಲಕರ ದಿನ. ಗೃಹ ನಿರ್ಮಾಣ ಮಾಡಲು ಯೋಚಿಸುವಿರಿ.

ತುಲಾ: ಸಹೋದ್ಯೋಗಿ ಗಳೊಂದಿಗೆ ಹಲವಾರು ವಿಷಯಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು.
ವೃಶ್ಚಿಕ: ಆರೋಗ್ಯದ ವಿಷಯದಲ್ಲಿ ಜಾಗರೂಕ ರಾಗಿರುವುದು ಬಹಳ ಒಳ್ಳೆಯದು.
ಧನುಸ್ಸು: ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.

ಮಕರ: ಸ್ನೇಹಿತನಿಗೆ ಸಹಾಯ ಮಾಡುವಿರಿ. ಸಂಗಾತಿಯೊಂದಿಗೆ ಜಗಳವಾಡುವ ಸಾಧ್ಯತೆಯಿದೆ.
ಕುಂಭ: ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಮಕ್ಕಳಿಂದ ಅನುಕೂಲವಾಗಲಿದೆ.
ಮೀನ: ಅಜೀರ್ಣ, ವಾಯು, ತಲೆನೋವು, ಕೀಲುನೋವಿನಂತಹ ಆರೋಗ್ಯ ಸಮಸ್ಯೆ ಕಾಡಲಿವೆ.

Articles You Might Like

Share This Article