ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-08-2022)

Social Share

ನಿತ್ಯ ನೀತಿ: ಮನಸ್ಸು ನಿರ್ಮಲವಾಗಿದ್ದರೆ ಅದೇ ಸಾಕ್ಷಾತ್ಕಾರ. ಮಾತು ಮೃದುವಾಗಿದ್ದರೆ ಅದೇ ಚಮತ್ಕಾರ. ನಡತೆ ಶುದ್ಧವಾಗಿದ್ದರೆ ಅದೇ ಪುರಸ್ಕಾರ. ಬದುಕು ಸರಳವಾಗಿದ್ದರೆ ಅವರಿಗೊಂದು ನಮಸ್ಕಾರ.

ಪಂಚಾಂಗ ಸೋಮವಾರ 29-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು /ಭಾದ್ರಪದ ಮಾಸ / ಶುಕ್ಲ ಪಕ್ಷ /ತಿಥಿ: ದ್ವಿತೀಯಾ /ನಕ್ಷತ್ರ: ಉತ್ತರಾಭಾದ್ರ / ಮಳೆ ನಕ್ಷತ್ರ: ಮಖಾ

ಸೂರ್ಯೋದಯ; ಬೆ.06.09
ಸೂರ್ಯಾಸ್ತ: 06.33
ರಾಹುಕಾಲ: 7.30-9.00
ಯಮಗಂಡ ಕಾಲ: 10.30-12.00
ಗುಳಿಕ ಕಾಲ: 1.30-3.00

ರಾಶಿ ಭವಿಷ್ಯ
ಮೇಷ
: ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಪರಿಶ್ರಮ ದಿಂದ ದುಡಿದರೆ ಪ್ರಗತಿಯ ಹಾದಿ ಕಾಣುವಿರಿ.
ವೃಷಭ: ಚರ್ಮ ಸಂಬಂಧಿ ಅನಾರೋಗ್ಯ ಕಾಣಿಸಿ ಕೊಂಡರೆ ಆಯುರ್ವೇದದ ಮೊರೆ ಹೋಗುವುದರಿಂದ ಶಾಶ್ವತ ಪರಿಹಾರ ದೊರೆಯಲಿದೆ.
ಮಿಥುನ: ಕಚೇರಿಯಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡುವುರಿಂದ ಹೆಚ್ಚಿನ ಲಾಭ ಪಡೆಯುವಿರಿ.

ಕಟಕ: ಪ್ರಾರಂಭಿಸಿದ ಎಲ್ಲ ಕೆಲಸಗಳಲ್ಲೂ ಯಶಸ್ಸು, ಲಾಭ ಸಿಗಲಿದೆ.
ಸಿಂಹ: ಆದಾಯಕ್ಕಿಂತ ವೆಚ್ಚ ಗಳು ಅಧಿಕವಾಗುತ್ತವೆ. ಆರೋಗ್ಯದ ಬಗ್ಗೆ ಗಮನವಿರಲಿ.
ಕನ್ಯಾ: ಮಕ್ಕಳೊಡನೆ ಕಾಲ ಕಳೆಯುವಿರಿ. ಸಣ್ಣಪುಟ್ಟ ಮಾನಸಿಕ ಕಿರಿಕಿರಿಗಳು ತಪ್ಪಿದಂತಾಗುತ್ತದೆ. ಮಕ್ಕಳ ಮೇಲೆ ನಿಗಾ ಇರಲಿ.

ತುಲಾ: ಲಾಭ ಗಳಿಸುವುದಕ್ಕಾಗಿ ಇನ್ನೊಬ್ಬರಿಗೆ ಮೋಸ ಮಾಡದಿರಿ. ವಿವಾದದಲ್ಲಿ ಸಿಲುಕುವಿರಿ.
ವೃಶ್ಚಿಕ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ.
ಧನುಸ್ಸು: ಅಪರೂಪದ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.

ಮಕರ: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ.
ಕುಂಭ: ಸರ್ಕಾರಿ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ. ಹೆಚ್ಚಿನ ಲಾಭ ಗಳಿಸುವಿರಿ.
ಮೀನ: ವೈಯಕ್ತಿಕ ಸಮಸ್ಯೆಗಳು ಬಗೆಹರಿದು ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

Articles You Might Like

Share This Article