ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-10-2022)

Social Share

ನಿತ್ಯ ನೀತಿ: ಎಲ್ಲವೂ ಇದ್ದು ಶಕ್ತಿಶಾಲಿಗಳು ಎನ್ನಿಸಿಕೊಳ್ಳುವುದು ದೊಡ್ಡದಲ್ಲ. ಎಲ್ಲ ಕಳೆದಾಗಲೂ ತೋರುವ ಧೈರ್ಯವೇ ನಿಜವಾದ ಶಕ್ತಿ.

ಪಂಚಾಂಗ ಶನಿವಾರ 29-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಜ್ಯೇಷ್ಠ / ಮಳೆ ನಕ್ಷತ್ರ: ಸ್ವಾತಿ
ಸೂರ್ಯೋದಯ: ಬೆ.06.12
ಸೂರ್ಯಾಸ್ತ: 05.54
ರಾಹುಕಾಲ: 9.00-10.30
ಯಮಗಂಡ ಕಾಲ: 1.30-3.00
ಗುಳಿಕ ಕಾಲ: 6.00-7.30

ರಾಶಿ ಭವಿಷ್ಯ
ಮೇಷ
: ಆರ್ಥಿಕ ಸಮಸ್ಯೆಗಳು ಪರಿಹಾರವಾಗಿ ಶತ್ರುಗಳು ಸಹ ದೂರವಾಗುವರು.
ವೃಷಭ: ಸ್ವಂತ ಉದ್ಯಮ ದಲ್ಲಿರುವವರು ಕಾರ್ಯ ಕ್ಷೇತ್ರದಲ್ಲಿ ಲಾಭ ಗಳಿಸುವರು.
ಮಿಥುನ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.

ಕಟಕ: ಮಕ್ಕಳ ಆರೋಗ್ಯ, ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿ ಕಾಳಜಿ ವಹಿಸುವುದು ಒಳಿತು.
ಸಿಂಹ: ಇಡೀ ದಿನ ಉತ್ಸಾಹ ದಿಂದಿರುವಿರಿ. ವೈವಾಹಿಕ ಜೀವನದಲ್ಲಿ ಹೊಸತನ ಮೂಡಲಿದೆ.
ಕನ್ಯಾ: ನಿಮ್ಮ ಬಗ್ಗೆ ಟೀಕೆ ಮಾಡುವವರನ್ನು ನಿರ್ಲಕ್ಷಿಸುವುದು ಒಳಿತು.

ತುಲಾ: ಸ್ಥಗಿತಗೊಂಡ ಕೆಲಸ ಪ್ರಾರಂಭಿಸಲು ಯಾರನ್ನಾದರೂ ಶಿಫಾರಸು ಮಾಡುವಿರಿ.
ವೃಶ್ಚಿಕ: ಆರ್ಥಿಕ ವಿಚಾರದಲ್ಲಿ ಸಂಬಂಧಪಟ್ಟ ಕಾರ್ಯದಲ್ಲಿ ಪ್ರಗತಿ ಸಾಸುವಿರಿ.
ಧನುಸ್ಸು: ವಿವಿಧ ಮೂಲಗಳಿಂದ ಧನಾರ್ಜನೆ ಯಾಗಲಿದೆ. ಸಂಜೆ ವೇಳೆ ಅತಿಥಿಗಳ ಆಗಮನವಾಗಲಿದೆ.

ಮಕರ: ವ್ಯಾಪಾರ ಮತ್ತು ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.
ಕುಂಭ: ಏಕಾಗ್ರತೆಯಿಂದ ಕೆಲಸ ಮಾಡಿದಲ್ಲಿ ಲಾಭ ದೊರೆಯಲಿದೆ. ದೂರ ಪ್ರಯಾಣ ಮಾಡುವಿರಿ.
ಮೀನ: ವೈದ್ಯರು ನೀಡುವ ಸಲಹೆಗಳನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ.

Articles You Might Like

Share This Article