ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(29-12-2022)

Social Share

ನಿತ್ಯ ನೀತಿ : ತಾತ್ಕಾಲಿಕ ಜೀವನದಲ್ಲಿ ಎಲ್ಲವನ್ನೂ ಶಾಶ್ವತ ಹೊಂದಲು ಸಾಧ್ಯವಿಲ್ಲ ಎಂದು ಅರಿತುಕೊಂಡಾಗ ಜೀವನವು ತುಂಬಾ ಸುಲಭವಾಗುತ್ತದೆ.

ಪಂಚಾಂಗ ಗುರುವಾರ 29-12-2022
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಪೂರ್ವಾಭಾದ್ರ / ಮಳೆ ನಕ್ಷತ್ರ: ಮೂಲಾ
ಸೂರ್ಯೋದಯ : ಬೆ.06.40
ಸೂರ್ಯಾಸ್ತ : 06.03
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ವಿಧೇಯತೆಯಿಂದ ಇರುವ ನಿಮ್ಮ ಗುಣ ಉನ್ನತ ಅಧಿಕಾರಿಗಳಿಗೆ ಇಷ್ಟವಾಗಲಿದೆ.
ವೃಷಭ: ನಿರೀಕ್ಷಿಸಿದಂತೆ ಅಧಿಕ ಧನಲಾಭ ದೊರೆಯಲಿದೆ. ಅನ್ಯರ ಮಾತಿನ ಬಗ್ಗೆ ವಿಶ್ವಾಸ ಬೇಡ.
ಮಿಥುನ: ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಹಿರಿಯರ ಸಲಹೆ ಪಡೆದು ಕೆಲಸ ಮುಂದುವರೆಸಿ.

ಕಟಕ: ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಸೌಹಾರ್ದತೆ ಇರಲಿದೆ.
ಸಿಂಹ: ಪದೇ ಪದೇ ಮಾನಸಿಕ ಕಿರಿಕಿರಿ ಉಂಟಾಗಲಿದೆ. ಸಂಸಾರದಲ್ಲಿ ಸಮತೋಲನ ಕಾಪಾಡಿಕೊಳ್ಳಿ.
ಕನ್ಯಾ: ಸಮಾಧಾನಚಿತ್ತ ದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಕೊಳ್ಳಬಹುದು.

ತುಲಾ: ನೀವು ಚಿಂತಿಸದಂತೆ ನಡೆಯದ ಕಾರಣ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.
ವೃಶ್ಚಿಕ: ಕುಟುಂಬದ ವಿಷಯದಲ್ಲಿ ನಿಮ್ಮ ದೃಢ ನಿಲುವಿಗೆ ಎಲ್ಲರಿಂದಲೂ ಸಮ್ಮತಿ ಸಿಗಲಿದೆ.
ಧನುಸ್ಸು: ಸರ್ಕಾರದಿಂದ ಆಗಬೇಕಿರುವ ಕೆಲಸ- ಕಾರ್ಯಗಳು ಸುಗಮವಾಗಿ ನೆರವೇರಲಿವೆ.

ಮಕರ: ಉದ್ಯೋಗ ಬದಲಾವಣೆ ವಿಚಾರದಲ್ಲಿನ ಗೊಂದಲವನ್ನು ಮೇಲಧಿಕಾರಿಗಳ ಗಮನಕ್ಕೆ ತನ್ನಿ.
ಕುಂಭ: ಶಾಂತವಾಗಿದ್ದರೆ ಒಳ್ಳೆಯದು. ವಿರೋಧಿಗಳನ್ನು ನಿರ್ಲಕ್ಷಿಸದಿರುವುದು ಸೂಕ್ತ.
ಮೀನ: ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ. ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ.

#DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article