ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-09-2022)

Social Share

ನಿತ್ಯ ನೀತಿ: ನಿನ್ನ ದಾರಿಯನ್ನು ಬೇಕಾದರೆ ಬದಲಿಸು, ಗುರಿಯನ್ನಲ್ಲ. ನಿನ್ನದೇ ದಾರಿಯಲಿ ನಿನ್ನದೇ ಗುರಿಯಿರಲಿ.


ಪಂಚಾಂಗ ಶುಕ್ರವಾರ 30-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಅನುರಾಧ / ಮಳೆ ನಕ್ಷತ್ರ: ಹಸ್ತ
ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.10
ರಾಹುಕಾಲ: 10.30-12.00
ಯಮಗಂಡ ಕಾಲ: 3.00-4.30
ಗುಳಿಕ ಕಾಲ: 7.30-9.00

ರಾಶಿ ಭವಿಷ್ಯ
ಮೇಷ
: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸಲು ಹೋಗದಿರಿ. ಕಷ್ಟ ಎದುರಿಸಬೇಕಾಗುತ್ತದೆ.
ವೃಷಭ: ತಂದೆಯವರ ಕಠಿಣ ನಡವಳಿಕೆ ನಿಮಗೆ ಸಿಟ್ಟು ಬರಿಸುತ್ತದೆ. ಶಾಂತವಾಗಿರುವುದು ಒಳಿತು.
ಮಿಥುನ: ಉದ್ಯೋಗ-ವ್ಯವಹಾರದಲ್ಲಿ ಸಂದರ್ಭಕ್ಕೆ ಸಹಾಯ ದೊರೆತು ಯಶಸ್ಸು ಸಾಧಿಸುವಿರಿ.

ಕಟಕ: ನೂತನ ಮಿತ್ರರು ಸಿಗುವುದರಿಂದ ಸಂತೋಷ ಹೆಚ್ಚಾಗಲಿದೆ.
ಸಿಂಹ: ಉದ್ಯೋಗ-ವ್ಯವಹಾರ ಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾಣುವಿರಿ.
ಕನ್ಯಾ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.

ತುಲಾ: ನಿಮ್ಮ ನಡವಳಿಕೆಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.
ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ತುಸು ಜಾಣತನ ತೋರದಿದ್ದರೆ ಸಂಕಷ್ಟಕ್ಕೆ ಸಿಲುಕಿಕೊಳ್ಳುವಿರಿ.
ಧನುಸ್ಸು: ವೈಯಕ್ತಿಕ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದೂರ ಪ್ರಯಾಣ ಬೇಡ.

ಮಕರ: ಕೆಟ್ಟ ಆಲೋಚನೆ ಮಾಡುವುದನ್ನು ತಪ್ಪಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕುಂಭ: ದೂರದ ಬಂಧುಗಳ ಆಗಮನವಾಗಲಿದೆ. ನೆರೆಹೊರೆಯವರು ನಿಮ್ಮ ನೆರವಿಗೆ ಬರುವರು.
ಮೀನ: ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಅಡ್ಡದಾರಿ ತುಳಿಯುವುದು ಬೇಡ.

Articles You Might Like

Share This Article