ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-11-2022)

Social Share

ನಿತ್ಯ ನೀತಿ: ಸಲ್ಲದ ವ್ಯಕ್ತಿಗಳು ನಮ್ಮಿಂದ ದೂರವಾದಂತೆ ಉತ್ತಮ ಸಂಗತಿಗಳು ಹತ್ತಿರವಾಗುತ್ತವೆ. ಅನವಶ್ಯಕ ವಾದವುಗಳನ್ನು ತ್ಯಜಿಸುತ್ತ ಅವಶ್ಯಕ ವಾದವುಗಳಿಗೆ ಸ್ಥಳ ಮಾಡಿಕೊಳ್ಳೋಣ.

ಪಂಚಾಂಗ ಬುಧವಾರ 30-11-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಧನಿಷ್ಠಾ / ಮಳೆ ನಕ್ಷತ್ರ: ಅನುರಾಧ
ಸೂರ್ಯೋದಯ: ಬೆ.06.25
ಸೂರ್ಯಾಸ್ತ: 05.51
ರಾಹುಕಾಲ: 12.00-1.30
ಯಮಗಂಡ ಕಾಲ: 7.30-9.00
ಗುಳಿಕ ಕಾಲ: 10.30-12.00

ರಾಶಿ ಭವಿಷ್ಯ
ಮೇಷ
: ಹಣ ಹೇಗೆ ವಿನಿಯೋಗವಾಗಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಬಹಳ ಮುಖ್ಯ.
ವೃಷಭ: ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ನಡೆಯುವ ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
ಮಿಥುನ: ಬಹಳ ದಿನಗಳ ನಂತರ ದೂರದ ಬಂಧುಗಳ ಆಗಮನವಾಗಲಿದೆ.

ಕಟಕ: ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ.
ಸಿಂಹ: ಬಂಧುಗಳನ್ನು ವ್ಯವಹಾರದಲ್ಲಿ ತೊಡಗಿಸಿ ಕೊಳ್ಳುವುದರಿಂದ ಶ್ರಮ ಕಡಿಮೆಯಾಗುವುದು.
ಕನ್ಯಾ: ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಗಳಿಸುವಿರಿ. ಕೆಲವರು ಹಲವು ವಿಷಯಗಳ ಬಗ್ಗೆ ನಿಮ್ಮಿಂದ ಸಲಹೆ ಕೇಳುವರು.

ತುಲಾ: ಯುವಕರು ಕೆಲಸ ಹುಡುಕುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ. ದೂರ ಪ್ರಯಾಣ ಬೇಡ.
ವೃಶ್ಚಿಕ: ವಧು ಅಥವಾ ವರನನ್ನು ಹುಡುಕುತ್ತಿದ್ದಲ್ಲಿ ಸೂಕ್ತ ಸಂಬಂಧ ದೊರೆಯುವುದು ಕಷ್ಟಸಾಧ್ಯವಾಗಲಿದೆ.
ಧನುಸ್ಸು: ನೀವು ಮಾತನಾಡುವ ರೀತಿಯಿಂದಾಗಿ ಬೇರೆಯವರಿಗೆ ನೋವಾಗಬಹುದು.

ಮಕರ: ತಂದೆಯವರ ಕಠಿಣ ನಡವಳಿಕೆ ನಿಮಗೆ ಸಿಟ್ಟು ಬರಿಸುತ್ತದೆ. ಶಾಂತವಾಗಿರುವುದು ಒಳಿತು.
ಕುಂಭ: ಉದ್ಯೋಗದ ಕಡೆಗೆ ಹೆಚ್ಚಿನ ಗಮನ ಹರಿಸಿ. ನಿರೀಕ್ಷೆಗೂ ಮೀರಿ ಖರ್ಚು ಹೆಚ್ಚಾಗಲಿದೆ.
ಮೀನ: ಯಾವುದೇ ಕೆಲಸ ಮಾಡುವಾಗ ಹಿರಿಯರ ಸಲಹೆ-ಸೂಚನೆಗಳನ್ನು ಪಡೆಯುವುದು ಒಳಿತು.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article