ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-12-2022)

Social Share

ನಿತ್ಯ ನೀತಿ : ನಿಮ್ಮ ಮೇಲೆ ನೀವು ನಂಬಿಕೆ ಇಡಿ. ಆಗ ಜಗತ್ತು ನಿಮ್ಮ ಪಾದದಡಿಯಲ್ಲಿರುತ್ತದೆ.

ಪಂಚಾಂಗ ಶುಕ್ರವಾರ 30-12-2022
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಉತ್ತರಾಭಾದ್ರ / ಮಳೆ ನಕ್ಷತ್ರ:ಪೂರ್ವಾಷಾಢ
ಸೂರ್ಯೋದಯ : ಬೆ.06.41
ಸೂರ್ಯಾಸ್ತ : 06.03
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಪ್ರಾಣಮಿತ್ರರರ ಸಹಕಾರದಿಂದ ಜೀವನದಲ್ಲಿ ಉನ್ನತ ಸ್ಥಾನ ಪಡೆಯುವಿರಿ.
ವೃಷಭ: ನೀವು ಆಡಿದ ಮಾತನ್ನು ಉಳಿಸಿಕೊಳ್ಳುವಲ್ಲಿ ಸೋಲಬೇಕಾಗುತ್ತದೆ. ಕೃಷಿ ಬಗ್ಗೆ ಆಸಕ್ತಿ ಮೂಡಲಿದೆ.
ಮಿಥುನ: ಇನ್ನೊಬ್ಬರ ಮಾತುಗಳನ್ನು ಆಲಿಸಿ ತೀರ್ಮಾನಕ್ಕೆ ಬರುವುದು ಅನಿರ್ವಾಯವಾಗಲಿದೆ.

ಕಟಕ: ಕುಟುಂಬದಲ್ಲಿ ಸೌಹಾರ್ದಯುತ ವಾತಾ ವರಣ ಇರುವುದು. ಸಾಲ ತೀರಿಸಿದ ನೆಮ್ಮದಿ ಸಿಗಲಿದೆ.
ಸಿಂಹ: ಸೋದರನ ಆಗಮನ ದಿಂದ ಮನೆಯಲ್ಲಿ ಹೆಚ್ಚಿನ ಸಂಭ್ರಮ ಮೂಡಲಿದೆ.
ಕನ್ಯಾ: ಷೇರು ಮಾರುಕಟ್ಟೆ ಹಾಗೂ ಕಮಿಷನ್ ವ್ಯಾಪಾರಕ್ಕೆ ಸಂಬಂಧಿಸಿದ ವೃತ್ತಿಯಲ್ಲಿರುವವರಿಗೆ ನಷ್ಟ ಉಂಟಾಗಲಿದೆ.

ತುಲಾ: ಯೋಗಾಭ್ಯಾಸದಿಂದ ಆರೋಗ್ಯ ಚೆನ್ನಾಗಿರುವುದು. ಧ್ಯಾನ ಮತ್ತು ಭಜನೆಯಿಂದ ನೆಮ್ಮದಿ ಸಿಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ.
ವೃಶ್ಚಿಕ: ಸೌಜನ್ಯತೆಯಿಂದ ನಡೆದುಕೊಳ್ಳುವುದರಿಂದ ನೆರೆಹೊರೆಯವರು ನಿಮಗೆ ಸ್ಪಂದಿಸುವರು.

ಧನುಸ್ಸು: ಸರ್ಕಾರದಿಂದ ಆಗಬೇಕಿರುವ ಕೆಲಸ- ಕಾರ್ಯಗಳು ಸುಗಮವಾಗಿ ನೆರವೇರಲಿವೆ.
ಮಕರ: ದೂರ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ.
ಕುಂಭ: ಹಣಕಾಸಿನ ವ್ಯತ್ಯಾಸ ಗಳಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.
ಮೀನ: ನಿಮ್ಮ ಮೇಲಿದ್ದ ಆಪಾದನೆಗಳು ದೂರಾಗಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.

#DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article