ನಿತ್ಯ ನೀತಿ : ಒಳ್ಳೆಯ ಸತ್ಕಾರ್ಯ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅನೇಕ ಹೂವುಗಳು ಅರಳಿದರೂ ಸಹ ಅವೆಲ್ಲವೂ ದೇವರಿಗೆ ಅರ್ಪಿತವಾಗುವುದಿಲ್ಲ.
ಪಂಚಾಂಗ ಬುಧವಾರ 31-05-2023
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು /
ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಹಸ್ತ / ಯೋಗ: ವ್ಯತೀಪಾತ / ಕರಣ: ಭವ
ಸೂರ್ಯೋದಯ : ಬೆ.05.52
ಸೂರ್ಯಾಸ್ತ : 06.42
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00
ರಾಶಿ ಭವಿಷ್ಯ
ಮೇಷ: ಸಾಂಸಾರಿಕ ಜೀವನದಲ್ಲಿ ಹೊಂದಾಣಿಕೆ ಯಿಂದ ನಡೆದುಕೊಳ್ಳುವುದು ಒಳಿತು.
ವೃಷಭ: ಉನ್ನತ ಅಧಿಕಾರಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಹೊಟೇಲ್ ಉದ್ದಿಮೆದಾರರಿಗೆ ಆದಾಯದಲ್ಲಿ ವ್ಯತ್ಯಯವಾಗಲಿದೆ.
ಮಿಥುನ: ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಹೊಸ ಯೋಜನೆಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಕಟಕ: ಕಾನೂನು ವಿದ್ಯಾರ್ಥಿಗಳಿಗೆ ಗೊಂದಲದ ವಾತಾವರಣ ಎದುರಾಗಲಿದೆ.
ಸಿಂಹ: ಕೃಷಿ ಕಾರ್ಮಿಕರಿಗೆ ಬಿಡುವಿಲ್ಲದ ಕೆಲಸಗಳು ನೆರವೇರಲಿವೆ.
ಕನ್ಯಾ: ನೀವು ಕೈ ಹಾಕಿದ ಕೆಲಸಗಳು ಯಾವುದೇ ತೊಂದರೆ ಯಿಲ್ಲದೆ ನೆರವೇರಲಿವೆ.
ತುಲಾ: ಯಾವುದೇ ಅನಿವಾರ್ಯ ಕೆಲಸಗಳಿದ್ದರೂ ದೂರ ಪ್ರಯಾಣ ಮಾಡುವುದು ಸೂಕ್ತವಲ್ಲ.
ವೃಶ್ಚಿಕ: ಮನೆಯಲ್ಲಿ ಮತ್ತು ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ.
ಧನುಸ್ಸು: ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಲಕ್ಷಣ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.
ಮಕರ: ನಿಮ್ಮ ಏಳಿಗೆಯನ್ನು ಸಹಿಸಲಾಗದೆ ಹತ್ತಾರು ಶತ್ರುಗಳು ಎದುರಾಗುವರು.
ಕುಂಭ: ರಾಜಕೀಯ ವ್ಯಕ್ತಿಗಳಿಗೆ ಅಧಿಕಾರಿಗಳ ಭಯ ಕಾಡಲಿದೆ. ಮಾತಿಗೆ ಮಾತು ಬೆಳೆಸುವುದು ಬೇಡ.
ಮೀನ: ಆದಾಯದಲ್ಲಿ ವೃದ್ಧಿಯಿದ್ದರೂ ನೆಮ್ಮದಿ ಇರುವುದಿಲ್ಲ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,