ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-01-2022)

Social Share

ನಿತ್ಯ ನೀತಿ : ನಮ್ಮೊಳಗಿನ ಬಲ, ಧೈರ್ಯ ಹಾಗೂ ಘನತೆಯಿಂದ ಬರುವ ಸೌಂದರ್ಯವು ಅತ್ಯಂತ ಮಹತ್ವದ್ದು.
ಪಂಚಾಂಗ: ಶನಿವಾರ , 01-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಕೃಷ್ಣ ಪಕ್ಷ | ತಿಥಿ: ತ್ರಯೋದಶಿ| ನಕ್ಷತ್ರ: ಜ್ಯೇಷ್ಠಾ| ಮಳೆ ನಕ್ಷತ್ರ: ಪೂರ್ವಾಷಾಢ
* ಸೂರ್ಯೋದಯ : ಬೆ.06.42
* ಸೂರ್ಯಾಸ್ತ : 06.05
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30
#ಇಂದಿನ ಭವಿಷ್ಯ :
ಮೇಷ: ಹಳೆ ಸ್ನೇಹಿತರೊಂದಿಗೆ ಮಾತನಾಡುವ ಮೂಲಕ ನಿಮ್ಮ ವಿಷಯಗಳನ್ನು ಹಂಚಿಕೊಳ್ಳಬಹುದು.
ವೃಷಭ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಜೀವನ ಸಂಗಾತಿಯ ಬೆಂಬಲ ನಿಮಗೆ ಸಿಗುತ್ತದೆ.
ಮಿಥುನ: ಮನೆಯ ಸದಸ್ಯರು ನಿಮ್ಮನ್ನು ನೋಯಿಸಿ ದ್ದರೆ, ಅವರು ನಿಮ್ಮ ಬಳಿ ಬಂದು ಕ್ಷಮೆ ಕೇಳುವರು.
ಕಟಕ: ಮಾನಸಿಕ ಒತ್ತಡ ಹೆಚ್ಚಾಗಬಹುದು. ಯೋಗ ಮಾಡುವುದರಿಂದ ಪ್ರಯೋಜನವಾಗುತ್ತದೆ.
ಸಿಂಹ: ಸಾಲದ ವ್ಯವಹಾರ ಮಾಡುವುದನ್ನು ತಪ್ಪಿಸಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ.
ಕನ್ಯಾ: ಆಹಾರದ ಬಗ್ಗೆ ಗಮನ ಕೊಡುವುದು ಒಳಿತು. ಇಲ್ಲದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು. ಎಚ್ಚರಿಕೆ ವಹಿಸಿ.
ತುಲಾ: ಕೆಲಸಕ್ಕೆ ಸಂಬಂಧಿಸಿದಂತೆ ಹಿರಿಯರಿಂದ ಕೆಲವು ಉತ್ತಮ ಸಲಹೆಗಳನ್ನು ಪಡೆಯಬಹುದು.
ವೃಶ್ಚಿಕ: ಒಡಹುಟ್ಟಿದವರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ ಮತ್ತು ಅವರಿಂದ ಲಾಭವೂ ದೊರೆಯುವುದು. ಮನೆಯ ಹಿರಿಯ ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳಾಗಲಿವೆ.
ಧನುಸ್ಸು: ಸಾಮಾಜಿಕ ಜೀವನದಲ್ಲಿ ಆಹ್ಲಾದಕರ ಅನುಭವಗಳಾಗುತ್ತವೆ. ಸಮಯಕ್ಕೆ ಸರಿಯಾಗಿ ಪ್ರತಿ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ಮಕರ: ಉತ್ತಮ ಕಂಪೆನಿಯೊಂದಿಗೆ ಸಂದರ್ಶನ ಪಡೆ ಯುವ ಸಾಧ್ಯತೆಗಳಿವೆ. ದೂರ ಪ್ರಯಾಣ ಮಾಡುವಿರಿ.
ಕುಂಭ: ತಂದೆಯೊಂದಿಗೆ ವೈಮನಸ್ಯವಿದ್ದರೆ ಪರಿಹರಿಸಿ ಕೊಳ್ಳಬಹುದು. ಅವರ ಮಾತಿಗೆ ಮನ್ನಣೆ ನೀಡಿ.
ಮೀನ: ಮನೆಯ ಸಾಮಾಗ್ರಿಗಳ ಖರೀದಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.

Articles You Might Like

Share This Article