ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-02-2022)

Social Share

ನಿತ್ಯ ನೀತಿ :ಜೀವನವೆಂಬುದು ಸೈಕಲ್ ಸವಾರಿ ಇದ್ದಂತೆ. ಸಮತೋಲನ ಇರಬೇಕೆಂದರೆ ಚಲಿಸುತ್ತಲೇ ಇರಬೇಕು.
# ಪಂಚಾಂಗ : ಮಂಗಳವಾರ, 01-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಕೃಷ್ಣ ಪಕ್ಷ | ತಿಥಿ: ಅಮಾವಾಸ್ಯೆ| ನಕ್ಷತ್ರ: ಶ್ರವಣ| ಮಳೆ ನಕ್ಷತ್ರ: ಶ್ರವಣ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.21
* ರಾಹುಕಾಲ : 3.00-4.30
* ಯಮಗಂಡ ಕಾಲ :9.00-10.30
* ಗುಳಿಕ ಕಾಲ : 12.00-1.30
# ರಾಶಿಭವಿಷ್ಯ 
ಮೇಷ: ವೃತ್ತಿಜೀವನದಲ್ಲಿ ಗಮನಾರ್ಹ ಯಶಸ್ಸು ಸಾಧಿಸುವಿರಿ. ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ.
ವೃಷಭ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು. ಒತ್ತಡ ಕಡಿಮೆಯಾಗಲಿದೆ.
ಮಿಥುನ: ಉದ್ಯೋಗಿಗಳಿಗೆ ಕಠಿಣ ಪರಿಶ್ರಮದಿಂದ ಉತ್ತಮ ಪ್ರತಿಫಲ ದೊರೆಯಲಿದೆ.
ಕಟಕ: ವ್ಯಾಪಾರ ಮತ್ತು ವೃತ್ತಿ ಜೀವನದಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ.
ಸಿಂಹ: ಅತಿಥಿಗಳ ಆಗಮನ ದಿಂದಾಗಿ ಖರ್ಚು-ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ.
ಕನ್ಯಾ: ಹಿಡಿದ ಕೆಲಸ ಗಳನ್ನು ಒಂದೇ ಬಾರಿಗೆ ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಲಿದೆ.
ತುಲಾ: ಅತಿಯಾದ ಆತ್ಮವಿಶ್ವಾಸ ಬೇಡ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದು ಕೊಳ್ಳುವುದನ್ನು ತಪ್ಪಿಸಿ.
ವೃಶ್ಚಿಕ: ಆರೋಗ್ಯ ಸಮಸ್ಯೆಗಳು ಎದುರಾಗ ಬಹುದು. ಸೂಕ್ತ ಸಮಯಕ್ಕೆ ಔಷಧೋಪಚಾರ ಮಾಡುವುದರಲ್ಲಿ ತಡವಾಗದಂತೆ ನೋಡಿಕೊಳ್ಳಿ.
ಧನುಸ್ಸು: ಕಚೇರಿಯಲ್ಲಿ ಉನ್ನತ ಅಧಿಕಾರಿಯೊಂದಿಗೆ ವಾದ-ವಿವಾದ ನಡೆಯುವ ಸಾಧ್ಯತೆಗಳಿವೆ.
ಮಕರ: ಹೆಜ್ಜೆಹೆಜ್ಜೆಗೂ ಶತ್ರುಗಳಿಂದ ಅಡೆತಡೆ ಉಂಟಾಗುವುದರಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ.
ಕುಂಭ: ಕೆಲಸದ ಹೊರೆ ಹೆಚ್ಚಾಗುವುದರಿಂದ ಸಹೋದ್ಯೋಗಿಗಳ ನಡುವೆ ವಾಗ್ವಾದ ನಡೆಯಲಿದೆ.
ಮೀನ: ಶತ್ರುಗಳ ಕಾಟ ಅಧಿಕವಿರುತ್ತದೆ. ಆದರೆ ಅವರು ನಿಮ್ಮನ್ನು ಏನೂ ಮಾಡಲು ಆಗುವುದಿಲ್ಲ.

Articles You Might Like

Share This Article