ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-03-2022)

Social Share

ನಿತ್ಯ ನೀತಿ : ಸಂಬಂಧ ಉಳಿಯಬೇಕಾದರೆ ಕ್ಷಮಿಸುವುದನ್ನು ಕಲಿಯಬೇಕು. ತಪ್ಪಿನ ಪ್ರಮಾಣದ ಬಗ್ಗೆ ಲೆಕ್ಕ ಹಾಕಬಾರದು. ಏಕೆಂದರೆ ತಪ್ಪಾಗಿದೆ ಎನ್ನುವುದಕ್ಕಿಂತ ಯಾವ ಕಾರಣಕ್ಕಾಗಿ ಎನ್ನುವುದು ಬಹಳ ಮುಖ್ಯ.
# ಪಂಚಾಂಗ : ಮಂಗಳವಾರ, 01-03-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಧನಿಷ್ಠಾ / ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.36
* ಸೂರ್ಯಾಸ್ತ : 06.29
* ರಾಹುಕಾಲ : 12.00-1.30
* ಯಮಗಂಡ ಕಾಲ : 7.30-9.00
* ಗುಳಿಕ ಕಾಲ : 10.30-12.00
# ಇಂದಿನ ರಾಶಿ ಭವಿಷ್ಯ
ಮೇಷ: ಆರ್ಥಿಕವಾಗಿ ಲಾಭ ಪಡೆಯಲು ಪ್ರಯತ್ನಿಸಿ ದರೂ ಖರ್ಚು-ವೆಚ್ಚಗಳು ಅಕವಾಗಲಿವೆ.
ವೃಷಭ: ಯೋಚಿಸಿ ನಿರ್ಧಾರ ಕೈಗೊಳ್ಳಿ. ಇಲ್ಲ ವಾದರೆ ಸಮಸ್ಯೆ ಎದುರಿಸಬೇಕಾಗಬಹುದು.
ಮಿಥುನ: ಸಂಗಾತಿ ಮೇಲಿರುವ ಅಪನಂಬಿಕೆ, ತಪ್ಪು ಕಲ್ಪನೆಗಳನ್ನು ಮನಸ್ಸಿನಿಂದ ತೆಗೆದುಹಾಕುವುದು ಒಳಿತು.
ಕಟಕ: ಮಕ್ಕಳು ಪ್ರತಿಯೊಂದು ಕಾರ್ಯದಲ್ಲೂ ಪ್ರಗತಿ ಸಾಸುವರು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ.
ಸಿಂಹ: ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಸಿಗುವ ಯಶಸ್ಸು ಆತ್ಮಸ್ಥೈರ್ಯ ಹೆಚ್ಚಿಸುತ್ತದೆ. ಹೊಸ ಹೊಸ ಅವಕಾಶಗಳು ಒದಗಿ ಬರಲಿವೆ.
ಕನ್ಯಾ: ನಿರಂತರವಾಗಿರುವ ಹಣ ಬರುವುದರಿಂದ ಮನಸ್ಸಿಗೆ ಸಂತೋಷ ಉಂಟಾಗಲಿದೆ. ಸ್ನೇಹಿತರ ಬೆಂಬಲ ಸಿಗಲಿದೆ.
ತುಲಾ: ಷೇರು ವ್ಯವಹಾರಗಳಲ್ಲಿ ತೊಡಗಿಸಿ ಕೊಂಡವರಿಗೆ ಉತ್ತಮ ಲಾಭ ಸಿಗಲಿದೆ. ಹೊಸ ವಾಹನ ಖರೀದಿಸುವ ಯೋಗವಿದೆ.
ವೃಶ್ಚಿಕ: ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಸಂಬಂಧಗಳು ಗಟ್ಟಿಗೊಳ್ಳಲಿವೆ.
ಧನುಸ್ಸು: ಹೊಸ ವ್ಯವಹಾರಗಳಿಗೆ ಕೈ ಹಾಕದಿರುವುದು ಒಳ್ಳೆಯದು. ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಮಕರ: ಉದ್ಯೋಗಾಕಾಂಕ್ಷಿಗಳಿಗೆ ಸಾಕಷ್ಟು ಪರಿಶ್ರಮದ ನಂತರ ಕೆಲಸ ಸಿಗಲಿದೆ.
ಕುಂಭ: ಕುಟುಂಬದಲ್ಲಿ ವಾದ-ವಿವಾದಗಳು ಉಂಟಾಗ ಬಹುದು. ಆದ್ದರಿಂದ ತಾಳ್ಮೆ ವಹಿಸುವುದು ಒಳ್ಳೆಯದು.
ಮೀನ: ವಿದ್ಯಾರ್ಥಿಗಳಿಗೆ ಶ್ರಮ ಪಟ್ಟರೆ ಯಶಸ್ಸು ಸಾಧ್ಯ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ.

Articles You Might Like

Share This Article