ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-10-2022)

Social Share

ನಿತ್ಯ ನೀತಿ : ಸಮಯದ ಜತೆ ನಡೆಯುವ ಆವಶ್ಯಕತೆಯಿಲ್ಲ. ಸತ್ಯದ ಜತೆ ಜಡೆಯಿರಿ. ಆಗ ಒಂದು ದಿನ ಸಮಯವೇ ನಿಮ್ಮ ಜತೆ ನಡೆಯುತ್ತದೆ.
ಪಂಚಾಂಗ : ಶನಿವಾರ, 01-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಜ್ಯೇಷ್ಠ / ಮಳೆ ನಕ್ಷತ್ರ: ಹಸ್ತ

ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.10
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ಇಂದಿನ ರಾಶಿಭವಿಷ್ಯ :

ಮೇಷ: ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಬೇಕಾಗಬಹುದು.
ವೃಷಭ: ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಲು ಶ್ರಮ ಪಡಬೇಕಾದೀತು. ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು.
ಮಿಥುನ: ಮುಂದೆ ಯಾವಾ ಗಲೋ ಹಣ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಸಾಲ ಮಾಡದಿರಿ.

ಕಟಕ: ಮನೆಯವರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳಿ.
ಸಿಂಹ: ಮಕ್ಕಳಿಗಾಗಿ ದುಬಾರಿ ವಸ್ತುಗಳನ್ನು ಖರೀದಿ ಮಾಡುವುದನ್ನು ನಿಲ್ಲಿಸಿ.
ಕನ್ಯಾ: ನಿಮ್ಮ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇಂದು ಸಾಧ್ಯವಾಗುತ್ತದೆ.

ತುಲಾ: ಒಡಹುಟ್ಟಿದವ ರೊಂದಿಗಿನ ಸಂಬಂಧ ಸುಧಾ ರಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಬಯಸಿದ ಯಶಸ್ಸು ಸಿಗಲಿದೆ.
ವೃಶ್ಚಿಕ: ಮಕ್ಕಳ ವಿದ್ಯಾಭ್ಯಾಸ ಅಥವಾ ವಿವಾಹದ ವಿಚಾರವಾಗಿ ಅನವಶ್ಯಕ ವಾದ ಮಾಡದಿರಿ.
ಧನುಸ್ಸು: ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.

ಮಕರ: ಉದ್ಯಮಿಗಳು ತಮ್ಮ ಸಹೋದ್ಯೋಗಿ ಗಳೊಂದಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಿ.
ಕುಂಭ: ನೀವು ಮಾಡುವ ತಪ್ಪಿನಿಂದಾಗಿ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠ ಕಲಿಯಬೇಕಾಗುತ್ತದೆ.
ಮೀನ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.

Articles You Might Like

Share This Article