ನಿತ್ಯ ನೀತಿ : ಹಣ ಮತ್ತು ಸಂಪತ್ತು ನೀರಿನ ಹಾಗೆ. ಬದುಕಿನ ದೋಣಿ ಸಾಗಲು ಎಷ್ಟು ಬೇಕೋ ಅಷ್ಟು ಮಾತ್ರ ಸಂಪತ್ತಿನ ಸಂಗ್ರಹ ಮಾಡಬೇಕು. ಅತಿಯಾಸೆ ಪಟ್ಟರೆ ಬದುಕಿನ ದೋಣಿಯೇ ಮುಳುಗಿ ಹೋಗುತ್ತದೆ.
ಪಂಚಾಂಗ: ಭಾನುವಾರ , 02-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಕೃಷ್ಣ ಪಕ್ಷ | ತಿಥಿ: ಅಮಾವಾಸ್ಯೆ| ನಕ್ಷತ್ರ: ಮೂಲಾ| ಮಳೆ ನಕ್ಷತ್ರ: ಪೂರ್ವಾಷಾಢ
* ಸೂರ್ಯೋದಯ : ಬೆ.06.42
* ಸೂರ್ಯಾಸ್ತ : 06.05
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 1.30-3.00
#ಇಂದಿನ ಭವಿಷ್ಯ :
ಮೇಷ: ಚಾಲನೆ ಮಾಡುವಾಗ ಸಂಚಾರಿ ನಿಯಮಗಳನ್ನು ಅನುಸರಿಸಿ ಇಲ್ಲದಿದ್ದರೆ ಚಾಲನೆ ಕಡಿತಗೊಳಿಸಬಹುದು.
ವೃಷಭ: ವೃತ್ತಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ಗಳಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
ಮಿಥುನ: ಸಂಗಾತಿಯಿಂದ ಅನೇಕ ಸಮಸ್ಯೆಗಳಿಗೆ ಪರಿಹಾರಗಳು ದೊರೆಯಲಿವೆ.
ಕಟಕ: ವ್ಯಾಪಾರಿಗಳು ಜಾಗರೂಕರಾಗಿರಿ. ಆರ್ಥಿಕ ಒಪ್ಪಂದ ಮಾಡಿಕೊಳ್ಳಲು ತಾಳ್ಮೆಯಿಂದ ವರ್ತಿಸಿ.
ಸಿಂಹ: ಕಚೇರಿಯಲ್ಲಿ ಹಿರಿಯ ಅಧಿಕಾರಿಗಳನ್ನು ನಿರ್ಲಕ್ಷಿಸುವ ತಪ್ಪು ಮಾಡಬೇಡಿ. ತೊಂದರೆಗೆ ಸಿಲುಕಬೇಕಾಗುತ್ತದೆ.
ಕನ್ಯಾ: ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ನೀವು ಮಾಡುವ ಕೆಲಸಗಳಿಗೆ ಪ್ರೀತಿಪಾತ್ರರಿಂದ ಬೆಂಬಲ ಸಿಗಲಿದೆ.
ತುಲಾ: ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ಬಹಳ ದಿನಗಳ ನಂತರ ಸಂತೋಷವಾಗಿರಲು ಸಮಯ ಸಿಗುವುದು.
ವೃಶ್ಚಿಕ: ಹಣದ ವಿಷಯದಲ್ಲಿ ಸ್ವಲ್ಪ ಜಾಗರೂಕರಾ ಗಿರಿ. ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ.
ಧನುಸ್ಸು: ಕಚೇರಿಯಲ್ಲಿ ಸಕಾರಾತ್ಮಕ ಚಿಂತನೆ ಮತ್ತು ಕಠಿಣ ಪರಿಶ್ರಮವು ನಿಮ್ಮ ಸಹೋದ್ಯೋಗಿಗಳಿಗಿಂತ ಮುಂದೆ ಇರಲು ಸಹಾಯ ಮಾಡುತ್ತದೆ.
ಮಕರ: ಮನೆಯಲ್ಲಿ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಕೆಲಸದ ಒತ್ತಡ ಹೆಚ್ಚಾಗಬಹುದು.
ಕುಂಭ: ವ್ಯಾಪಾರಿಗಳಿಗೆ ಲಾಭ ಗಳಿಸಲು ಉತ್ತಮ ಅವಕಾಶಗಳಿವೆ. ಸಂಗಾತಿಯಿಂದ ಸಿಹಿ ಸುದ್ದಿ ಕೇಳುವಿರಿ.
ಮೀನ: ಉದ್ಯೋಗಿಗಳಿಗೆ ಕಠಿಣ ಪರಿಶ್ರಮದಿಂದ ಉತ್ತಮ ಪ್ರತಿಫಲ ದೊರೆಯಲಿದೆ.
