ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-11-2022)

Social Share

ನಿತ್ಯ ನೀತಿ : ಸಾವಿರಾರು ಮೈಲಿಗಳ ಪಯಣ ಶುರುವಾಗುವುದೇ ಒಂದು ಹೆಜ್ಜೆಯಿಂದ.
ಪಂಚಾಂಗ : ಬುಧವಾರ, 02-11-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ಧನಿಷ್ಠಾ / ಮಳೆ ನಕ್ಷತ್ರ: ಸ್ವಾತಿ

* ಸೂರ್ಯೋದಯ : ಬೆ.06.14
* ಸೂರ್ಯಾಸ್ತ : 05.53
* ರಾಹುಕಾಲ : 12.00-1.30
* ಯಮಗಂಡ ಕಾಲ : 7.30-9.00
* ಗುಳಿಕ ಕಾಲ : 10.30-12.00

# ಇಂದಿನ ರಾಶಿಭವಿಷ್ಯ :
* ಮೇಷ: ಸೌಜನ್ಯತೆಯಿಂದ ನಡೆದುಕೊಳ್ಳುವುದರಿಂದ ನೆರೆಹೊರೆಯವರು ನಿಮಗೆ ಸ್ಪಂದಿಸುವರು.
* ವೃಷಭ: ನಿರೀಕ್ಷಿತ ಧನಾಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.
* ಮಿಥುನ: ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ ಮಾಡುವಿರಿ. ಮಕ್ಕಳಿಂದ ಸಂತೋಷ ಸಿಗಲಿದೆ.

* ಕಟಕ: ವ್ಯವಹಾರಕ್ಕೆ ಸಂಬಂಸಿದಂತೆ ಕಾನೂನು ವಿಷಯದಲ್ಲಿ ಹೆಚ್ಚಿನ ಸಲಹೆ ಪಡೆಯುವುದು * ಅನಿವಾರ್ಯವಾಗಲಿದೆ.
* ಸಿಂಹ: ಲೇವಾದೇವಿ ವ್ಯವಹಾರ ನಡೆಸುವುದು ಸರಿಯಲ್ಲ. ಸೋಮಾರಿತನ ಶತ್ರುವಾಗಿ ಪರಿಣಮಿಸಲಿದೆ.
* ಕನ್ಯಾ: ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ. ನಿರೀಕ್ಷಿತ ಸ್ಥಾನಮಾನ ಸಿಗಲಿದೆ.

* ತುಲಾ: ಅನಗತ್ಯ ಚರ್ಚೆಗಳಿಗೆ ಆಸ್ಪದ ನೀಡದಿರಿ. ಸಾಲ ಮಾಡುವ ಸ್ಥಿತಿ ತಂದುಕೊಳ್ಳಬೇಡಿ.
* ವೃಶ್ಚಿಕ: ಶುಭ ಸಮಾರಂಭಗಳು ನಡೆಯುವುದರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
* ಧನುಸ್ಸು: ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

* ಮಕರ: ಕಹಿ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ. ಹಿರಿಯರ ಮಾತುಗಳನ್ನು ಗೌರವಿಸಿ.
* ಕುಂಭ: ಭೂಮಿ, ಆಸ್ತಿ ವಿಚಾರಗಳಲ್ಲಿ ಪ್ರಗತಿ ಕಾಣುವಿರಿ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ.
* ಮೀನ: ಪತ್ನಿಯ ಸಹಕಾರದಿಂದ ನಿಮ್ಮ ಕೆಲಸ-ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ.

Articles You Might Like

Share This Article