ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-02-2022)

Social Share

ನಿತ್ಯ ನೀತಿ :  ನಮ್ಮನ್ನು ನಾವು ಸರಿಪಡಿಸಿಕೊಂಡರೆ ಇಡೀ ಜಗತ್ತನ್ನು ಸರಿಪಡಿಸಿದಂತೆ. ನಮ್ಮಲ್ಲಿ ನಾವು ಪರಿವರ್ತನೆ ತಂದುಕೊಂಡರೆ ಜಗತ್ತಿಗೇ ಬೆಳಕು ನೀಡಿದಂತೆ.
# ಪಂಚಾಂಗ : ಶುಕ್ರವಾರ , 04-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಕೃಷ್ಣ ಪಕ್ಷ | ತಿಥಿ: ಪಂಚಮಿ| ನಕ್ಷತ್ರ: ಉತ್ತರಾಭಾದ್ರ| ಮಳೆ ನಕ್ಷತ್ರ: ಶ್ರವಣ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.22
* ರಾಹುಕಾಲ : 1.30-12.00
* ಯಮಗಂಡ ಕಾಲ :  3.00-4.30
* ಗುಳಿಕ ಕಾಲ : 7.30-9.00
# ರಾಶಿಭವಿಷ್ಯ 
ಮೇಷ: ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಹೆಚ್ಚು ಉಲ್ಲಾಸದಿಂದಿರುವಿರಿ. ಉತ್ತಮ ದಿನ.
ವೃಷಭ: ಸ್ನೇಹಿತರಿಂದ ಅಚ್ಚರಿಯ ಉಡುಗೊರೆ ಸಿಗಲಿದೆ. ಬಯಸಿದ ಯಶಸ್ಸು ಸಾಧಿಸುವಿರಿ.
ಮಿಥುನ: ಕೆಲವು ಕಾರಣಗಳಿಂದ ಒಡಹುಟ್ಟಿದವ ರಿಂದ ದೂರವಾಗಿದ್ದರೆ ಅವರೊಂದಿಗೆ ಮಾತನಾಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿ.
ಕಟಕ: ದಾಂಪತ್ಯ ಜೀವನದಲ್ಲಿ ಉತ್ತಮ ಬದಲಾವಣೆಗಳಾಗಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.
ಸಿಂಹ: ವೃತ್ತಿ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳು ನಿವಾರಣೆಯಾಗಲಿವೆ. ಸಾಲದ ವ್ಯವಹಾರ ಮಾಡುವುದನ್ನು ಬಿಡಿ.
ಕನ್ಯಾ: ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಉತ್ತಮ ಆಫರ್ ಸಿಗುವ ಸಾಧ್ಯತೆ ಇದೆ.
ತುಲಾ: ಅಪರಿಚಿತ ವ್ಯಕ್ತಿಯ ಸಹಾಯದಿಂದ ಪ್ರಮುಖ ಸಮಸ್ಯೆಯೊಂದಕ್ಕೆ ಪರಿಹಾರ ಸಿಗಲಿದೆ.
ವೃಶ್ಚಿಕ: ತಂದೆಯೊಂದಿಗಿನ ಸಂಬಂಧದಲ್ಲಿ ಸುಧಾರಣೆ ಯಾಗಲಿದೆ. ಆರ್ಥಿಕ ಸಹಾಯವೂ ಸಿಗಲಿದೆ.
ಧನುಸ್ಸು: ಹಣದ ಕೊರತೆ ಇರುವುದಿಲ್ಲ. ಹಿಂದೆ ಮಾಡಿದ್ದ ಸಾಲವನ್ನು ತೀರಿಸುವಿರಿ.
ಮಕರ: ಬ್ಯಾಂಕಿಂಗ್, ಕಾನೂನು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ.
ಕುಂಭ: ಉತ್ತಮ ನಿರ್ಧಾರ ತೆಗೆದುಕೊಳ್ಳು ವಲ್ಲಿ ಸಫಲರಾಗುವಿರಿ. ಶಿಕ್ಷಕರು ನಿಮ್ಮನ್ನು ಬೆಂಬಲಿಸುವರು.
ಮೀನ: ಕೆಲಸದ ಹೊರೆ ಸ್ವಲ್ಪ ಕಡಿಮೆಯಾಗುತ್ತದೆ. ಈ ಕಾರಣದಿಂದಬಹಳಷ್ಟು ಸಮಯವನ್ನು ಖಾಲಿಯಾಗಿ ಕುಳಿತು ವ್ಯರ್ಥ ಮಾಡಬಹುದು.

Articles You Might Like

Share This Article