ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-01-2022)

Social Share

ನಿತ್ಯ ನೀತಿ :  ಒಬ್ಬರ ಸಾಮಥ್ರ್ಯವನ್ನು ನಾವು ಎಷ್ಟೋ ಬಾರಿ ತಪ್ಪಾಗಿ ನಿರ್ಣಯಿಸುತ್ತೇವೆ. ಬದ್ಧತೆ, ಧೈರ್ಯ, ಶಿಸ್ತು, ಮನೋಧರ್ಮದಂತಹ ಸಂಗತಿಗಳು ಸಹ ಸಾಮಥ್ರ್ಯಗಳೇ ಆಗಿರುತ್ತವೆ.
ಪಂಚಾಂಗ: ಬುಧವಾರ , 05-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಶುಕ್ಲ ಪಕ್ಷ | ತಿಥಿ: ತೃತೀಯಾ| ನಕ್ಷತ್ರ: ಶ್ರವಣ| ಮಳೆ ನಕ್ಷತ್ರ: ಪೂರ್ವಾಷಾಢ
* ಸೂರ್ಯೋದಯ : ಬೆ.06.43
* ಸೂರ್ಯಾಸ್ತ : 06.07
* ರಾಹುಕಾಲ : 12.00-1.30
* ಯಮಗಂಡ ಕಾಲ : 7.30-9.00
* ಗುಳಿಕ ಕಾಲ : 10.30-12.00
#ಇಂದಿನ ಭವಿಷ್ಯ :
ಮೇಷ: ಪೂರ್ವಜರ ಆಸ್ತಿಯಿಂದ ಲಾಭ ಸಿಗಲಿದೆ. ಕಿರಿಯ ಸಹೋದ್ಯೋಗಿಗಳಿಗೆ ಸಹಾಯ ಮಾಡುವಿರಿ.
ವೃಷಭ: ವಿದ್ಯಾರ್ಥಿಗಳು ಕಷ್ಟಕರವಾದ ವಿಷಯ ಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಮಿಥುನ: ಸಾಮಾಜಿಕ ಮಟ್ಟದಲ್ಲಿ ಚರ್ಚೆ ಮಾಡು ವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಅನಗತ್ಯವಾಗಿ ಮಾನಸಿಕ ತೊಂದರೆ ಅನುಭವಿಸಬೇಕಾಗುತ್ತದೆ.
ಕಟಕ: ಜೀವನ ಸಂಗಾತಿಯ ಬೆಂಬಲದೊಂದಿಗೆ ಪ್ರತಿ ಯೊಂದು ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು.
ಸಿಂಹ: ಸ್ನೇಹಿತರ ಸಹಾಯ ದಿಂದ ವೃತ್ತಿ ಕ್ಷೇತ್ರದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು. ಶಿಕ್ಷಕರ ಆಶೀರ್ವಾದ ಪಡೆಯಿರಿ.
ಕನ್ಯಾ: ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಆರ್ಥಿಕ ನಷ್ಟ ಉಂಟಾಗಲಿದೆ.
ತುಲಾ: ಪೋಷಕರು, ಹಿರಿಯರ ಆಶೀರ್ವಾದ ಪಡೆದು ಮನೆಯಿಂದ ಹೊರ ಬರುವುದು ಒಳಿತು.
ವೃಶ್ಚಿಕ: ಯೋಗ, ಧ್ಯಾನ ಮಾಡುವುದರಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ.
ಧನುಸ್ಸು: ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಬೇಕಾಗಬಹುದು.
ಮಕರ: ಮಗುವಿನ ಕಡೆಯಿಂದ ಸಂತೋಷ ಇರು ತ್ತದೆ. ಹಣದ ವಿಷಯದಲ್ಲಿ ಸಾಮಾನ್ಯ ದಿನಕ್ಕಿಂತ ಇಂದು ಉತ್ತಮವಾಗಿರುತ್ತದೆ.
ಕುಂಭ: ಹಳೆಯ ಕಾನೂನು ವಿಷಯಗಳಿಗೆ ಪರಿಹಾರ ದೊರೆಯಲಿದೆ. ದೂರ ಪ್ರಯಾಣ ಮಾಡದಿರಿ.
ಮೀನ: ಕಷ್ಟದಲ್ಲಿ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ.

Articles You Might Like

Share This Article