ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-03-2022)

Social Share

ನಿತ್ಯನೀತಿ : ಯಾರನ್ನಾದರೂ ಸೋಲಿಸುವುದು ಸುಲಭ. ಆದರೆ, ಗೆಲ್ಲುವುದು ತುಂಬಾ ಕಷ್ಟ.
ಪಂಚಾಂಗ : ಶನಿವಾರ , 05-03-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ  ಪಕ್ಷ / ತಿಥಿ: ತೃತೀಯಾ/ ನಕ್ಷತ್ರ: ರೇವತಿ/ ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.33
* ಸೂರ್ಯಾಸ್ತ : 06.29
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30
# ರಾಶಿಭವಿಷ್ಯ :
ಮೇಷ: ವೃತ್ತಿ ಕ್ಷೇತ್ರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಧಿಕೃತ ಪ್ರಯಾಣ ಮಾಡುವಿರಿ.
ವೃಷಭ: ಮನೆಯ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.
ಮಿಥುನ: ದೊಡ್ಡ ತೊಂದರೆಯಲ್ಲಿ ಸಿಲುಕಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ದುಡುಕದಿರಿ.
ಕಟಕ: ವಿದ್ಯಾರ್ಥಿಗಳು ಸಾಧ್ಯವಾದರೆ ಸ್ನೇಹಿತ ರೊಂದಿಗೆ ಅಧ್ಯಯನ ಮಾಡುವುದು ಒಳಿತು.
ಸಿಂಹ: ಉದ್ಯೋಗ ಬದಲಿ ಸಲು ಯೋಚಿಸುತ್ತಿರು ವವರು ಬುದ್ಧಿವಂತಿಕೆಯಿಂದ ಹೆಜ್ಜೆ ಇಡಬೇಕು.
ಕನ್ಯಾ: ಕೌಟುಂಬಿಕ ಅಗತ್ಯತೆ ಪೂರೈಸಲು ಹಣ ಖರ್ಚು ಮಾಡಬೇಕಾಗುತ್ತದೆ.
ತುಲಾ: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.
ವೃಶ್ಚಿಕ: ಆಸ್ತಿ, ಅಪಾರ್ಟ್‍ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.
ಧನುಸ್ಸು: ವೃತ್ತಿಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗುವಿರಿ.
ಮಕರ: ಅನೇಕ ಸಮಸ್ಯೆಗಳ ನಡುವೆಯೂ ವ್ಯಾಪಾರ ಕ್ಷೇತ್ರದಲ್ಲಿ ಮುಂದುವರಿಯುತ್ತೀರಿ.
ಕುಂಭ: ಹಣದ ಕೊರತೆ ಇರುವುದಿಲ್ಲ. ಕಠಿಣ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.
ಮೀನ: ಸುತ್ತಮುತ್ತಲಿನ ಜನರೊಂದಿಗೆ ಜಗಳ ಮಾಡದಿರುವುದು ಬಹಳ ಒಳ್ಳೆಯದು.

Articles You Might Like

Share This Article