ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-11-2021)

# ನಿತ್ಯ ನೀತಿ
ಅತಿಯಾದ ರೂಪ ಸೀತೆಗೆ ಮುಳುವಾಯಿತು. ಅತಿಯಾದ ಗರ್ವ ರಾವಣನಿಗೆ ಕೇಡುಂಟು ಮಾಡಿತು. ಅತಿಯಾದ ದಾನ ಬಲಿಯನ್ನು ನಾಶ ಮಾಡಿತು. ಆದುದರಿಂದ ಅತಿಯಾಗಿ ಯಾವುದನ್ನೂ ಮಾಡಬಾರದು.

# ಪಂಚಾಂಗ : ಶುಕ್ರವಾರ ,05-11-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಕಾರ್ತೀಕ ಮಾಸ / ಶುಕ್ಲ ಪಕ್ಷ
ತಿಥಿ: ಪ್ರತಿಪದ್/ ನಕ್ಷತ್ರ: ವಿಶಾಖ / ಮಳೆ ನಕ್ಷತ್ರ: ಸ್ವಾತಿ

# ಸೂರ್ಯೋದಯ  ಬೆ.06.15 / ಸೂರ್ಯಾಸ್ತ 05.52
# ರಾಹುಕಾಲ 1.30-12.00 / ಯಮಗಂಡ ಕಾಲ 3.00-4.30 / ಗುಳಿಕ ಕಾಲ 7.30-9.00

# ರಾಶಿ ಭವಿಷ್ಯ
ಮೇಷ: ಹಿಡಿದ ಕೆಲಸದಲ್ಲಿ ಅಂದುಕೊಂಡಂತಹ ಬೆಳವಣಿಗೆ ನಿರೀಕ್ಷೆ ಮಾಡುವುದು ಕಷ್ಟ.
ವೃಷಭ: ಹಣ ಸಿಕ್ಕಿತು ಎಂಬ ಕಾರಣಕ್ಕೆ ದುಂದುವೆಚ್ಚ ಮಾಡದೆ ಸಾಲ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ.
ಮಿಥುನ: ಅಜ್ಜ- ಅಜ್ಜಿ, ವಯಸ್ಸಾದ ತಂದೆ, ತಾಯಿ ಯನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗಬೇಡಿ.

ಕಟಕ: ಆಸ್ತಿ, ದಾಖಲೆ ಪತ್ರಗಳನ್ನು ದೂರದ ಪ್ರದೇಶಗಳಿಗೆ ತೆಗೆದುಕೊಂಡು ಹೋಗದಿರಿ.
ಸಿಂಹ: ಸುಲಭವಾಗಿ ಹಣ ಬರುತ್ತದೆ ಎಂಬ ಆಸೆ ತೋರಿಸಿ, ಕೆಲವು ದುರ್ಜನರು ನಿಮಗೆ ಹತ್ತಿರ ಆಗಲಿದ್ದಾರೆ.
ಕನ್ಯಾ: ಉದ್ಯೋಗ ಸ್ಥಳದಲ್ಲಿ ಮುಖ್ಯ ಜವಾಬ್ದಾರಿ ನಿರ್ವಹಿಸುವಾಗ ಬೇರೆಯವರಿಗೆ ಅದನ್ನು ವರ್ಗಾಯಿಸದಿರಿ.

ತುಲಾ: ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿ ಗಳನ್ನು ಮುಗಿಸಿಕೊಡುವ ಕಡೆಗೆ ಗಮನ ಹರಿಸಿ.
ವೃಶ್ಚಿಕ: ಉದ್ಯೋಗ ಬದಲಾವಣೆಗೆ ಪ್ರಯತ್ನಿಸ ಬಹುದು.ದೇವರ ಮೇಲೆ ನಂಬಿಕೆ ಇರಲಿ.
ಧನುಸ್ಸು: ಯಾವ ವಿಚಾರದಲ್ಲೂ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಹಿಡಿದ ಕೆಲಸಗಳನ್ನು ಒಂದೇ ಸಲಕ್ಕೆ ಪೂರ್ಣಗೊಳಿಸುವುದು ಕಷ್ಟವಾಗಲಿದೆ.

ಮಕರ: ಎಲ್ಲವೂ ಸರಿಯಿದೆ ಎಂಬ ಭಾವನೆ ಇದ್ದರೂ ನಿಮ್ಮ ಒಳಗೊಂದು ಅಸಮಾಧಾನ ಇದ್ದೇ ಇರುತ್ತದೆ.
ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು ಮತ್ತು ಎಚ್ಚರಿಕೆಯಿಂದ ಇರಬೇಕು.
ಮೀನ: ತಂದೆಯೊಂದಿಗೆ ವಿನಾಕಾರಣ ಸಣ್ಣ- ಪುಟ್ಟ ವಿಷಯಗಳಿಗೆ ಮನಸ್ತಾಪ ಆಗಬಹುದು.