ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-01-2022)

Social Share

ನಿತ್ಯ ನೀತಿ : ಒಂದು ಎಲೆ ಉದುರುತ್ತಾ ಹೇಳಿತು. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಅರಿತು ನಡೆ ಇದೇ ಜೀವನ.
ಪಂಚಾಂಗ: ಗುರುವಾರ , 06-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಶುಕ್ಲ ಪಕ್ಷ | ತಿಥಿ: ಚತುರ್ಥಿ| ನಕ್ಷತ್ರ: ಧನಿಷ್ಠಾ| ಮಳೆ ನಕ್ಷತ್ರ: ಪೂರ್ವಾಷಾಢ
* ಸೂರ್ಯೋದಯ : ಬೆ.06.43
* ಸೂರ್ಯಾಸ್ತ : 06.07
* ರಾಹುಕಾಲ : 1.30-3.00
* ಯಮಗಂಡ ಕಾಲ : 6.00-7.30
* ಗುಳಿಕ ಕಾಲ : 9.00-10.30
#ಇಂದಿನ ಭವಿಷ್ಯ :
ಮೇಷ: ವಿವಾಹಿತರಾಗಿದ್ದರೆ ನಿಮ್ಮ ವೈವಾಹಿಕ ಜೀವನ ದಲ್ಲಿ ಇಂದು ಒಂದು ಮಹತ್ವದ ದಿನವಾಗಬಹುದು.
ವೃಷಭ: ವ್ಯಾಪಾರಿಗಳು ಹಣದ ಬಗ್ಗೆ ಜÁಗರೂಕರಾಗಿರ ಬೇಕು.ಇಲ್ಲದಿದ್ದರೆ ದೊಡ್ಡ ನಷ್ಟ ಸಂಭವಿಸಬಹುದು.
ಮಿಥುನ: ಕಚೇರಿಯಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರೆ, ತುಂಬಾ ಸಮತೋಲನದಿಂದ ವರ್ತಿಸಬೇಕಾಗುತ್ತದೆ.
ಕಟಕ: ಕಚೇರಿ ಕೆಲಸದಲ್ಲಿ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ.
ಸಿಂಹ: ಆತುರದ ನಿರ್ಧಾರ ಕೈಗೊಳ್ಳುವುದರಿಂದ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.
ಕನ್ಯಾ: ಆದಾಯ ಹೆಚ್ಚಿಸಿ ಕೊಳ್ಳಲು ನೀವು ಪ್ರಯತ್ನಿಸಿದರೆ ಅದರಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಬೇಡಿ.
ತುಲಾ: ದೂರ ಪ್ರಯಾಣ ತಪ್ಪಿಸಲು ವ್ಯಾಪಾರಿಗಳಿಗೆ ಕೆಲವು ಸಲಹೆ-ಸೂಚನೆಗಳನ್ನು ನೀಡಲಾಗುತ್ತದೆ.
ವೃಶ್ಚಿಕ: ಕಠಿಣ ಪರಿಶ್ರಮದ ನಂತರವೂ ಉದ್ಯೋಗಿಗಳಿಗೆ ಉತ್ತಮ ಯಶಸ್ಸು ಸಿಗುವುದಿಲ್ಲ.
ಧನುಸ್ಸು: ಕೆಲವು ಸ್ಥಗಿತಗೊಂಡ ಕೆಲಸಗಳು ಇಂದು ಪೂರ್ಣಗೊಳ್ಳಬಹುದು. ಹಣಕಾಸು ಪರಿಸ್ಥಿತಿ ಉತ್ತಮವಾಗಿರುತ್ತದೆ.
ಮಕರ: ಸಂಗಾತಿಯೊಂದಿಗೆ ವಿವಾದಾತ್ಮಕ ವಿಷಯಗಳನ್ನು ಚರ್ಚಿಸುವುದನ್ನು ತಪ್ಪಿಸಿ, ಇಲ್ಲದಿದ್ದರೆ ಭಿನ್ನಾಭಿಪ್ರಾಯ ಉಂಟಾಗಬಹುದು.
ಕುಂಭ: ತಂದೆಯ ಆರೋಗ್ಯದಲ್ಲಿ ಸುಧಾರಣೆ ಯಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ.
ಮೀನ: ಉದ್ಯೋಗಿಗಳಿಗೆ ಕಚೇರಿಯಲ್ಲಿ ಮೇಲಧಿಕಾರಿಗಳ ಬೆಂಬಲ ದೊರೆಯಲಿದೆ.

Articles You Might Like

Share This Article