ನಿತ್ಯ ನೀತಿ : ವೃದ್ಧಾಪ್ಯ ಎನ್ನುವುದು ಪರ್ವತವನ್ನು ಏರಿದಂತೆ. ಮೇಲಕ್ಕೆ ಏರುತ್ತಾ ಹೋದಂತೆ ಹೆಚ್ಚು ದಣಿವಾಗುತ್ತದೆ, ಉಸಿರುಗಟ್ಟಿದಂತೆ ಆಗುತ್ತದೆ. ಆದರೆ ದೃಷ್ಟಿಕೋನಗಳು ವಿಶಾಲವಾಗಿರುತ್ತವೆ.
# ಪಂಚಾಂಗ : ಭಾನುವಾರ , 06-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಶುಕ್ಲ ಪಕ್ಷ | ತಿಥಿ: ಷಷ್ಠಿ| ನಕ್ಷತ್ರ: ರೇವತಿ| ಮಳೆ ನಕ್ಷತ್ರ: ಧನಿಷ್ಠ
* ಸೂರ್ಯೋದಯ : ಬೆ.06.45
* ಸೂರ್ಯಾಸ್ತ : 06.23
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30
# ರಾಶಿಭವಿಷ್ಯ
ಮೇಷ: ಮನಸ್ಸನ್ನು ಕೇಂದ್ರೀಕರಿಸಲು ಯೋಗ ಮತ್ತು ಧ್ಯಾನವನ್ನು ಮಾಡಬೇಕಾಗಬಹುದು.
ವೃಷಭ: ವರ್ಗಾವಣೆಗೆ ಕಾಯುತ್ತಿದ್ದ ಉದ್ಯೋಗಿಗಳು ಅಪೇಕ್ಷಿತ ವರ್ಗಾವಣೆ ಪಡೆಯುವ ಮೂಲಕ ಶುಭ ಫಲಿತಾಂಶ ಪಡೆಯುವರು.
ಮಿಥುನ: ಹಿಂದೆ ಹೂಡಿಕೆ ಮಾಡಿದ ಹಣದಿಂದ ಉತ್ತಮ ಲಾಭ ಬರುವ ಸಾಧ್ಯತೆಗಳಿವೆ.
ಕಟಕ: ಇತರರಿಗಾಗಿ ಹೆಚ್ಚು ಖರ್ಚು ಮಾಡಿ, ಅವರಿಗೆ ಪಾರ್ಟಿ ನೀಡಲು ಸಹ ಯೋಚನೆ ಮಾಡುವಿರಿ.
ಸಿಂಹ: ಕುಟುಂಬದ ಸಮಸ್ಯೆಗಳಿಗೆ ಸಂಬಂಧಿಸಿದ ನಿಮ್ಮ ಸ್ವಾರ್ಥ ತೀರ್ಪಿನಿಂದಾಗಿ ಕುಟುಂಬದವರು ನಿಮ್ಮ ವಿರುದ್ಧ ತಿರುಗಿಸಬಹುದು.
ಕನ್ಯಾ: ಎಲ್ಲಾ ಕೆಲಸಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತ ವಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
ತುಲಾ: ಪಾಲುದಾರರು ಮೋಸಗೊಳಿಸಬಹುದು ಅಥವಾ ಹಣ ತೆಗೆದುಕೊಂಡು ಓಡಿಹೋಗಬಹುದು.
ವೃಶ್ಚಿಕ: ಸ್ವತಃ ನಿಮ್ಮ ರಹಸ್ಯವನ್ನು ಮನೆಯ ಇತರ ಸದಸ್ಯರಿಗೆ ತಿಳಿಸುವುದು ಉತ್ತಮವಾಗಿದೆ.
ಧನುಸ್ಸು: ನಿಮ್ಮ ಸುತ್ತಲೂ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಿ.
ಮಕರ: ಪ್ರತಿಯೊಂದು ರೀತಿಯ ವಹಿವಾಟು ಮಾಡುವ ವೇಳೆ ಕಾಗದಪತ್ರಗಳನ್ನು ನೋಡಿಕೊಳ್ಳಿ.
ಕುಂಭ: ಯಾವುದೇ ಪ್ರಮುಖ ಕೆಲಸ ಮಾಡುವ ತಜ್ಞರು, ತಂದೆ ಅಥವಾ ಹಿರಿಯ ವ್ಯಕ್ತಿಯನ್ನು ಸಂಪರ್ಕಿಸುವುದನ್ನು ಮರೆಯದಿರಿ.
ಮೀನ: ಕುಟುಂಬ ಸದಸ್ಯರು ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನಿರ್ಧರಿಸಬಹುದು.
