ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-03-2022)

Social Share

ನಿತ್ಯನೀತಿ : ಯಾವುದೇ ಸಮಸ್ಯೆಗೂ ಯುದ್ಧ ಶಾಶ್ವತವಾದ ಪರಿಹಾರವಲ್ಲ.
ಪಂಚಾಂಗ : ಭಾನುವಾರ, 06-03-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ  ಪಕ್ಷ / ತಿಥಿ: ಚತುರ್ಥಿ/ ನಕ್ಷತ್ರ: ಅಶ್ವಿನಿ/ ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.33
* ಸೂರ್ಯಾಸ್ತ : 06.29
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30
# ರಾಶಿಭವಿಷ್ಯ :
ಮೇಷ: ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಉತ್ತಮ ಅವಕಾಶಗಳು ಸಿಗುವ ಸಾಧ್ಯತೆ ಇದೆ.
ವೃಷಭ: ಪೋಷಕರ ಸೇವೆಯನ್ನು ಆಸಕ್ತಿ ವಹಿಸಿ ಮಾಡುವುದರಿಂದ ತೊಂದರೆಗಳಿಂದ ಮುಕ್ತರಾಗುವಿರಿ.
ಮಿಥುನ: ಪಿತ್ರಾರ್ಜಿತ ಆಸ್ತಿಯಿಂದ ಉತ್ತಮ ಲಾಭ ದೊರೆಯಲಿದೆ. ಮಕ್ಕಳಿಂದ ಸಂತೋಷ ಸಿಗಲಿದೆ.
ಕಟಕ: ವಾಹನಗಳು ಮತ್ತು ಯಂತ್ರೋಪಕರಣ ಗಳಿಂದ ಗಾಯವಾಗುವ ಸಂಭವವಿದೆ, ಎಚ್ಚರವಿರಲಿ.
ಸಿಂಹ: ಇಲ್ಲಸಲ್ಲದ ವಿಚಾರ ಗಳಿಗೆ ಕಿವಿಗೊಟ್ಟು ಮನಸ್ಸಿನ ನೆಮ್ಮದಿ ಹಾಳುಕೊಳ್ಳಬೇಡಿ.
ಕನ್ಯಾ: ಸ್ನೇಹಿತರಿಂದ ಅಚ್ಚರಿಯ ಉಡುಗೊರೆ ಸಿಗಲಿದೆ. ಬಯಸಿದ ಯಶಸ್ಸು ಸಾಧಿಸುವಿರಿ.
ತುಲಾ: ವಿನಾಕಾರಣ ವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ. ಯಾರೊಂದಿಗೂ ವಾಗ್ವಾದಕ್ಕಿಳಿಯದಿರಿ.
ವೃಶ್ಚಿಕ: ಕೆಲವು ಕಾರಣಗಳಿಂದ ಒಡಹುಟ್ಟಿದವರಿಂದ ದೂರವಾಗಿದ್ದರೆ ಅವರೊಂದಿಗೆ ಮಾತನಾಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿ.
ಧನುಸ್ಸು: ಹಣದ ಕೊರತೆ ಇರುವುದಿಲ್ಲ. ಹಿಂದೆ ಮಾಡಿದ್ದ ಸಾಲವನ್ನು ಸಹ ತೀರಿಸುವಿರಿ.
ಮಕರ: ಹಣ ಸುಲಭವಾಗಿ ದೊರೆಯುತ್ತದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡದಿರಿ
ಕುಂಭ: ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಗಳು ದೂರವಾಗಿ ಉತ್ತಮ ಬದಲಾವಣೆಗಳಾಗಲಿವೆ.
ಮೀನ: ಉದ್ಯೋಗಸ್ಥರಿಗೆ ವಿಶೇಷ ಲಾಭದ ಅವಕಾಶಗಳು ಸಿಗಲಿವೆ. ಉತ್ತಮವಾದ ದಿನ.

Articles You Might Like

Share This Article