ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(06-11-2022)

Social Share

ನಿತ್ಯ ನೀತಿ : ಮೊದಲು ನೀವು ಆಟದ ನಿಯಮಗಳನ್ನು ಕಲಿಯಬೇಕು. ನಂತರ ನೀವು ಅದನ್ನು ಬೇರೆಯವರಿಗಿಂತ ಉತ್ತಮವಾಗಿ ಆಡಬೇಕು.

# ಪಂಚಾಂಗ : ಭಾನುವಾರ, 06-11-2022

ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ರೇವತಿ / ಮಳೆ ನಕ್ಷತ್ರ: ಸ್ವಾತಿ

* ಸೂರ್ಯೋದಯ : ಬೆ.06.15
* ಸೂರ್ಯಾಸ್ತ : 05.52
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30

# ಇಂದಿನ ರಾಶಿಭವಿಷ್ಯ
ಮೇಷ
: ಪ್ರಾಣಮಿತರರ ಸಹಕಾರದಿಂದ ಜೀವನದಲ್ಲಿ ಉನ್ನತ ಸ್ಥಾನ ಪಡೆಯುವಿರಿ.
ವೃಷಭ: ನಿಮ್ಮ ಬುದ್ಧಿವಂತಿಕೆಯ ಸಾಮಥ್ರ್ಯದ ಅರಿವು ನಿಮಗಿರುವುದಿಲ್ಲ. ಧೈರ್ಯದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗಲಿದೆ.
ಮಿಥುನ: ಎಲ್ಲಾ ವಿಚಾರ ಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ.

ಕಟಕ: ಉದ್ಯೋಗ ಬದಲಾವಣೆಗೆ ಅಡೆತಡೆ ಉಂಟಾಗಲಿದೆ. ಅತೀ ಒತ್ತಡಕ್ಕೆ ಒಳಗಾಗದಿರಿ.
ಸಿಂಹ: ಆದಾಯ ಹೆಚ್ಚಾಗಿದ್ದರೂ ಹಣ ನೀರಿನಂತೆ ಖರ್ಚಾಗುವುದು.

ಕನ್ಯಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿಯಾದರೂ ಸಾಲ ನೀಡುವುದು ಸರಿಯಲ್ಲ.
ತುಲಾ: ಕೃಷಿಕರಿಗೆ ಆಗಾಗ ಎದುರಾಗುವ ಅಡೆತಡೆಗಳು ನಿವಾರಣೆಯಾಗಲಿವೆ.

ವೃಶ್ಚಿಕ: ಧಾರ್ಮಿಕ ಕಾರ್ಯಗಳತ್ತ ಗಮನ ಹರಿಸುವಿರಿ. ಕೀರ್ತಿ ನಿಮ್ಮನ್ನು ಅರಸಿ ಬರಲಿದೆ.
ಧನುಸ್ಸು: ಅಪರೂಪದ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.

ಮಕರ: ಮೇಲಕಾರಿಗಳಿಂದ ಯಾವುದೇ ವಿಷಯವನ್ನು ಮುಚ್ಚಿಡುವ ಪ್ರಯತ್ನ ಮಾಡದಿರಿ.
ಕುಂಭ: ಕುಟುಂಬ ನಿರ್ವಹಣೆಯಲ್ಲಿ ಒಡಹುಟ್ಟಿದವರ ಸಹಕಾರ ದೊರೆಯಲಿದೆ.
ಮೀನ: ಬಂಧುಗಳ ಅವಹೇಳನಕಾರಿ ಮಾತುಗಳು ನಿಮ್ಮ ಮನಸ್ಸಿಗೆ ನೋವುಂಟುಮಾಡಲಿದೆ.

Articles You Might Like

Share This Article