ನಿತ್ಯ ನೀತಿ : ಬೇರೆಯವರ ಸಲುವಾಗಿ ನೀವು ದೀಪ ಬೆಳಗಿಸಿದರೆ ಅದು ನಿಮ್ಮ ಹಾದಿಗೂ ಬೆಳಕು ನೀಡುತ್ತದೆ.
ಪಂಚಾಂಗ: ಶುಕ್ರವಾರ , 07-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಶುಕ್ಲ ಪಕ್ಷ | ತಿಥಿ: ಪಂಚಮಿ| ನಕ್ಷತ್ರ: ಪೂರ್ವಾಭಾದ್ರ| ಮಳೆ ನಕ್ಷತ್ರ: ಪೂರ್ವಾಷಾಢ
* ಸೂರ್ಯೋದಯ : ಬೆ.06.44
* ಸೂರ್ಯಾಸ್ತ : 06.08
* ರಾಹುಕಾಲ : 10.30-12.00
* ಯಮಗಂಡ ಕಾಲ : 3.00-4.30
* ಗುಳಿಕ ಕಾಲ : 7.30-9.00
#ಇಂದಿನ ಭವಿಷ್ಯ :
ಮೇಷ: ಉದ್ಯೋಗದಾತರು ಉದ್ಯೋಗಿಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವರು.
ವೃಷಭ: ದೀರ್ಘಕಾಲದವರೆಗೆ ಕಾಡುತ್ತಿರುವ ಪ್ರಶ್ನೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಿರಿ.
ಮಿಥುನ: ಹಿಂದಿನ ಕೆಲಸಗಳನ್ನು ಪೂರ್ಣಗೊಳಿಸಲು ಒತ್ತು ನೀಡಿ. ಸ್ಥಿರತೆ ಮತ್ತು ಸಾಮಥ್ರ್ಯವು ಬಲಗೊಳ್ಳುತ್ತದೆ.
ಕಟಕ: ವೈಯಕ್ತಿಕ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಸಿಂಹ: ಸಂಗಾತಿಯೊಂದಿಗೆ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಿಕೊಳ್ಳಿ. ಶಾಂತ ಸ್ವಭಾವದಲ್ಲಿರಿ.
ಕನ್ಯಾ: ಅಪಾಯ ಮೈ ಮೇಲೆ ಹಾಕಿಕೊಳ್ಳುವುದು ಮತ್ತು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವುದನ್ನು ತಪ್ಪಿಸಿ.
ತುಲಾ: ಖರ್ಚು ಮಿತಿ ಮೀರುವ ಸಾಧ್ಯತೆಯಿದೆ. ವೈಯಕ್ತಿಕ ಜೀವನ ಕಷ್ಟಕರವಾಗಬಹುದು.
ವೃಶ್ಚಿಕ: ಯಾವುದೇ ಪ್ರಮುಖ ಕೆಲಸಗಳನ್ನು ಮಾಡುವಾಗ ಹಿರಿಯರ ಮಾರ್ಗದರ್ಶನ, ಸಲಹೆ-ಸೂಚನೆಗಳನ್ನು ಪಡೆಯುವುದು ಸೂಕ್ತ.
ಧನುಸ್ಸು: ಕೆಲವರು ನಿಮ್ಮನ್ನು ಸಾಲದಲ್ಲಿ ಮುಳುಗಿಸಲು ಪ್ರಯತ್ನಿಸುವರಿ. ಜಾಗ್ರತೆಯಿಂದಿರಿ.
ಮಕರ: ದೇವರ ಮೇಲೆ ನಂಬಿಕೆಯಿಟ್ಟು ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ.
ಕುಂಭ: ದೂರದ ಬಂಧುಗಳ ಆಗಮನದಿಂದ ಮನಸ್ಸಿಗೆ ಸಂತೋಷವಾಗುತ್ತದೆ.
ಮೀನ: ಸಹೋದ್ಯೋಗಿಗಳು ಮತ್ತು ಅಧಿಕಾರಿಗಳ ಬೆಂಬಲದಿಂದ ಕೆಲಸ-ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯುತ್ತವೆ.
