ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-03-2022)

Social Share

ನಿತ್ಯನೀತಿ : ಧರ್ಮ ಒಂದೇ ನಿಜವಾದ ಮಿತ್ರ. ಸಾವಿನಲ್ಲಿಯೂ ಸಹ ಜತೆಯಲ್ಲಿರುತ್ತದೆ. ಉಳಿದ ಎಲ್ಲವೂ ಶರೀರದೊಡನೆಯೇ ನಾಶವಾಗುತ್ತವೆ.
ಪಂಚಾಂಗ : ಸೋಮವಾರ , 07-03-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ  ಪಕ್ಷ / ತಿಥಿ: ಪಂಚಮಿ/ ನಕ್ಷತ್ರ: ಭರಣಿ/ ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.32
* ಸೂರ್ಯಾಸ್ತ : 06.29
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00
# ರಾಶಿಭವಿಷ್ಯ :
ಮೇಷ: ವೃತ್ತಿ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳು ನಿವಾರಣೆ ಯಾಗಲಿವೆ. ಸಾಲದ ವ್ಯವಹಾರ ಮಾಡುವುದು ಬೇಡ.
ವೃಷಭ: ಬ್ಯಾಂಕಿಂಗ್, ಕಾನೂನು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ.
ಮಿಥುನ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಅಧಿಕೃತ ಪ್ರಯಾಣ ಕೈಗೊಳ್ಳದಿರಿ.
ಕಟಕ: ಅಪರಿಚಿತ ವ್ಯಕ್ತಿಯ ಸಹಾಯದಿಂದ ಪ್ರಮುಖ ಸಮಸ್ಯೆಯೊಂದಕ್ಕೆ ಪರಿಹಾರ ಸಿಗಲಿದೆ.
ಸಿಂಹ: ಉತ್ತಮ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಫಲರಾಗುವಿರಿ. ಶಿಕ್ಷಕರು ನಿಮ್ಮನ್ನು ಬೆಂಬಲಿಸುವರು.
ಕನ್ಯಾ: ಕೆಲಸದ ಹೊರೆ ಸ್ವಲ್ಪ ಕಡಿಮೆಯಾಗುವುದರಿಂದ ಬಹಳಷ್ಟು ಸಮಯವನ್ನು ಖಾಲಿಯಾಗಿ ಕುಳಿತು ವ್ಯರ್ಥ ಮಾಡಬಹುದು.
ತುಲಾ: ನಿರೀಕ್ಷೆಗಿಂತ ಹೆಚ್ಚು ಖರ್ಚು ಮಾಡಬೇಕಾದ ಸಂದರ್ಭಗಳು ಎದುರಾಗಬಹುದು.
ವೃಶ್ಚಿಕ: ಸಣ್ಣಪುಟ್ಟ ತಪ್ಪುಗಳು ಕೂಡ ಅವಮಾನಕರ ಪರಿಸ್ಥಿತಿಗೆ ಕಾರಣವಾಗಬಹುದು.
ಧನುಸ್ಸು: ಕೆಲಸದ ಬಗ್ಗೆ ಹೆಚ್ಚು ಚಿಂತೆ ಮತ್ತು ಒತ್ತಡವನ್ನು ತೆಗೆದುಕೊಳ್ಳದಿದ್ದರೆ ಉತ್ತಮ.
ಮಕರ: ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಹೆಚ್ಚು ಉಲ್ಲಾಸದಿಂದಿರುವಿರಿ.
ಕುಂಭ: ತಂದೆಯೊಂದಿಗಿನ ಸಂಬಂಧದಲ್ಲಿ ಸುಧಾರಣೆ ಯಾಗಲಿದೆ. ಆರ್ಥಿಕ ಸಹಾಯವೂ ಸಿಗಲಿದೆ.
ಮೀನ: ಕುಟುಂಬದ ಸದಸ್ಯರು ಹೆಮ್ಮೆ ಪಡುವಂತಹ ಕೆಲಸ ಮಾಡುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.

Articles You Might Like

Share This Article