ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-03-2022)

Social Share

ನಿತ್ಯನೀತಿ :  ಮಕ್ಕಳು, ಹೆಂಡತಿ, ಮಿತ್ರರು ಮತ್ತು ಧನಗಳಲ್ಲಿ ಅತ್ಯಂತ ವ್ಯಾಮೋಹವನ್ನಿಡಬಾರದು. ಅವರ ಅಗಲಿಕೆ ನಿಶ್ಚಿತ.
ಪಂಚಾಂಗ : ಮಂಗಳವಾರ , 08-03-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ  ಪಕ್ಷ / ತಿಥಿ: ಷಷ್ಠಿ/ ನಕ್ಷತ್ರ: ಕೃತ್ತಿಕಾ/ ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.32
* ಸೂರ್ಯಾಸ್ತ : 06.29
* ರಾಹುಕಾಲ : 3.00-4.30
* ಯಮಗಂಡ ಕಾಲ : 9.00-10.30
* ಗುಳಿಕ ಕಾಲ : 12.00-1.30
# ರಾಶಿಭವಿಷ್ಯ :
ಮೇಷ: ಮನಸ್ಥಿತಿಯಲ್ಲಿ ಉತ್ತಮ ಬದಲಾವಣೆ ಗಳಾಗಲಿವೆ. ಅನಗತ್ಯ ಚಿಂತೆ ಮಾಡುವುದನ್ನು ಬಿಡಿ.
ವೃಷಭ: ಕೆಲಸ- ಕಾರ್ಯಗಳಲ್ಲಿ ಯಾವುದೇ ಸಮಸ್ಯೆಗಳು, ಅಡೆತಡೆಗಳು ಎದುರಾಗುವುದಿಲ್ಲ.
ಮಿಥುನ: ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಹೆಚ್ಚು ಗೊಂದಲಕ್ಕೊಳ ಗಾಗುವ ಸಾಧ್ಯತೆಗಳಿವೆ.
ಕಟಕ: ಆಧ್ಯಾತ್ಮಿಕ ವಿಷಯ ಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ ಇರಲಿ.
ಸಿಂಹ: ನಿಮ್ಮನ್ನು ಹೆಚ್ಚಾಗಿ ಹೊಗಳುವ ವ್ಯಕ್ತಿಗಳ ಬಗ್ಗೆ ಬಹಳ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಕನ್ಯಾ: ಪ್ರಯಾಣ ಮಾಡುವಾಗ ಎಚ್ಚರವಿರಲಿ. ಸಂಬಂಧಿಕರೊಂದಿಗಿನ ಪ್ರೀತಿ ಹೆಚ್ಚಾಗಲಿದೆ.
ತುಲಾ: ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡು ವಿರಿ. ಅಪರಿಚಿತ ವ್ಯಕ್ತಿಯ ಪರಿಚಯವಾಗಲಿದೆ.
ವೃಶ್ಚಿಕ: ಹಿರಿಯರೊಂದಿಗೆ ಮಾತಿಗೆ ಮಾತು ಬೆಳೆಸುವುದನ್ನು ಬಿಡಿ. ಅಹಂಕಾರದಿಂದಾಗಿ ಹಣಕಾಸು ನಷ್ಟ ಅನುಭವಿಸುವಿರಿ.
ಧನುಸ್ಸು: ತಾಯಿ ಮತ್ತು ಹಿರಿಯರ ಪಾದಗಳನ್ನು ಸ್ಪರ್ಶಿಸಿ ಆಶಿರ್ವಾದವನ್ನು ಪಡೆಯಿರಿ.
ಮಕರ: ವೃತ್ತಿಜೀವನದಲ್ಲಿ ಅಂದುಕೊಂಡಂತೆ ಸಾಧನೆ ಮಾಡುವಿರಿ. ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುವಿರಿ.
ಕುಂಭ: ಸ್ವಂತ ಉದ್ಯಮ ಪ್ರಾರಂಭಿಸಲು ಬಯಸುವ ವರಿಗೆ ಉನ್ನತ ಮಟ್ಟದ ಯಶಸ್ಸು ಸಿಗಲಿದೆ.
ಮೀನ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು. ಒತ್ತಡ ಕಡಿಮೆಯಾಗಲಿದೆ.

Articles You Might Like

Share This Article