ನಿತ್ಯ ನೀತಿ :ಜೀವನವು ಹೋರಾಟದ ಕಣ. ಹೋರಾಟದ ಮೂಲಕವೇ ನಾವು ಮುಂದಕ್ಕೆ ಸಾಗಬೇಕಿದೆ.
# ಪಂಚಾಂಗ : ಬುಧವಾರ , 09-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಶುಕ್ಲ ಪಕ್ಷ | ತಿಥಿ: ಅಷ್ಟಮಿ| ನಕ್ಷತ್ರ: ಕೃತ್ತಿಕಾ| ಮಳೆ ನಕ್ಷತ್ರ: ಧನಿಷ್ಠ
* ಸೂರ್ಯೋದಯ : ಬೆ.06.44
* ಸೂರ್ಯಾಸ್ತ : 06.24
* ರಾಹುಕಾಲ : 12.00-1.30
* ಯಮಗಂಡ ಕಾಲ : 7.30-9.00
* ಗುಳಿಕ ಕಾಲ : 10.30-12.00
# ರಾಶಿಭವಿಷ್ಯ
ಮೇಷ: ಯಾವುದಾದರೂ ಒಂದು ವಿಚಾರವಾಗಿ ಚಿಂತೆ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಎಚ್ಚರಿಕೆಯಿಂದಿರಿ.
ವೃಷಭ: ಉದ್ಯೋಗಿಗಳಿಗೆ ಕಚೇರಿಯಲ್ಲಿ ಮೇಲಧಿಕಾರಿಗಳ ಬೆಂಬಲ ದೊರೆಯಲಿದೆ.
ಮಿಥುನ: ಔಷಧಿ ಮತ್ತು ವೈದ್ಯರಿಗಾಗಿ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ.
ಕಟಕ: ಸಣ್ಣಪುಟ್ಟ ತಪ್ಪುಗಳು ಕೂಡ ಅವಮಾನಕರ ಪರಿಸ್ಥಿತಿಗೆ ಕಾರಣವಾಗಬಹುದು.
ಸಿಂಹ: ನಿಮ್ಮ ಕೆಲಸದ ಮೇಲೆ ಆಲೋಚನೆಯು ಪರಿಣಾಮ ಬೀರುತ್ತದೆ. ಎಚ್ಚರಿಕೆಯಿಂದಿರಿ.
ಕನ್ಯಾ: ಯಾವುದೇ ಕಾರಣಕ್ಕೂ ಇತರರ ಸಾಲಕ್ಕೆ ಜಾಮೀನಾಗಿ ನಿಲ್ಲದಿರಿ.
ತುಲಾ: ಕೆಲಸದ ಬಗ್ಗೆ ಹೆಚ್ಚು ಚಿಂತೆ ಮತ್ತು ಒತ್ತಡವನ್ನು ತೆಗೆದುಕೊಳ್ಳದಿದ್ದರೆ ಉತ್ತಮ.
ವೃಶ್ಚಿಕ: ಜೀವನ ಸಂಗಾತಿ ಯೊಂದಿಗೆ ಉತ್ತಮ ಸಾಮರಸ್ಯ ಇರುತ್ತದೆ. ಹಲವಾರು ಸಮಸ್ಯೆಗಳು ಪರಿಹಾರವಾಗಲಿವೆ.
ಧನುಸ್ಸು: ಧಾರ್ಮಿಕ ಚಟುವಟಿಕೆ ಮತ್ತು ಉನ್ನತ ತಂತ್ರಜ್ಞಾನದ ಕಡೆಗೆ ಒಲವು ಹೆಚ್ಚಾಗುತ್ತದೆ.
ಮಕರ: ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ. ಬುದ್ಧಿವಂತಿಕೆಯಿಂದ ವ್ಯವಹರಿಸುವುದು ಒಳಿತು.
ಕುಂಭ: ಹಠಾತ್ ನಷ್ಟ ಮತ್ತು ಲಾಭ ಎರಡೂ ಇರುತ್ತದೆ. ಮನೆಯ ವಾತಾವರಣ ಶಾಂತವಾಗಿರುತ್ತದೆ.
ಮೀನ: ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರವಾಗಿರುತ್ತದೆ.
