ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-05-2022)

Spread the love

ನಿತ್ಯ ನೀತಿ : ಯಶಸ್ವಿ ಜೀವನಕ್ಕಿಂತ ಸಂತೃಪ್ತ ಜೀವನವೇ ಮಿಗಿಲು. ಏಕೆಂದರೆ ಜೀವನದ ಯಶಸ್ಸು ಇತರರ ದೃಷ್ಟಿಯಲ್ಲಿರುತ್ತದೆ. ಜೀವದ ಸುಖ ನಮ್ಮ ಆತ್ಮ ತೃಪ್ತಿಯಲ್ಲಿರುತ್ತದೆ.

# ಪಂಚಾಂಗ : ಸೋಮವಾರ , 09-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಶುಕ್ಲ ಪಕ್ಷ / ತಿಥಿ: ಅಷ್ಟಮಿ/ ನಕ್ಷತ್ರ: ಆಶ್ಲೇಷಾ/ಮಳೆ ನಕ್ಷತ್ರ: ಭರಣಿ

* ಸೂರ್ಯೋದಯ : ಬೆ.5.56
* ಸೂರ್ಯಾಸ್ತ : 06.36
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00

# ಇಂದಿನ ರಾಶಿ ಭವಿಷ್ಯ : 
ಮೇಷ: ಮಕ್ಕಳಲ್ಲಿ ಆಲಸ್ಯ ಉಂಟಾಗಲಿದೆ. ಮಿತ್ರರೊಂದಿಗೆ ಮನಸ್ತಾಪ ಮಾಡಿಕೊಳ್ಳದಿರಿ.
ವೃಷಭ: ವಿಶೇಷ ವ್ಯಕ್ತಿಯೊಂದಿಗಿನ ಇಂದಿನ ನಿಮ್ಮ ಭೇಟಿಯು ಸ್ಮರಣೀಯವಾಗಿರುತ್ತದೆ.
ಮಿಥುನ: ಕೆಲಸದ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಗಳಾಗಬಹುದು.

ಕಟಕ: ಕಠಿಣ ಪರಿಶ್ರಮದ ಫಲದಿಂದಾಗಿ ಯಶಸ್ಸು ದೊರೆಯುತ್ತದೆ.
ಸಿಂಹ: ಮಾನಸಿಕ ಆಲಸ್ಯ ಕೊನೆಗೊಳ್ಳುತ್ತದೆ. ಹೊಸ ಉದ್ಯೋಗ ಸಿಗಲಿದೆ.
ಕನ್ಯಾ: ವಿದ್ಯಾರ್ಥಿಗಳು ಸ್ಪರ್ಧಾ ಕ್ಷೇತ್ರದಲ್ಲಿ ಯಶಸ್ಸು ಕಾಣುವರು.

ತುಲಾ: ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು ಆದರೆ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತೀರಿ.
ವೃಶ್ಚಿಕ: ಚಾತುರ್ಯತೆ ಮತ್ತು ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಯಶಸ್ವಿ ಸಾಧಿಸುವಿರಿ.
ಧನುಸ್ಸು: ಧೈರ್ಯ ಕಳೆದುಕೊಳ್ಳದೆ ಮುಂಬರುವ ಕಷ್ಟಕರ ಪರಿಸ್ಥಿತಿ ಎದುರಿಸಲು ಸಿದ್ದರಾಗಿ.

ಮಕರ: ವ್ಯಾಪಾರದಲ್ಲಿ ಹಣ ಗಳಿಸುವ ಸಾಧ್ಯತೆಗಳಿವೆ. ಕಾರ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿದೆ.
ಕುಂಭ: ಗಣ್ಯವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ. ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.
ಮೀನ: ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಅದೃಷ್ಟ ನಿಮ್ಮ ಕಡೆಗಿದೆ.

Facebook Comments