ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-02-2022)

Social Share

ನಿತ್ಯ ನೀತಿ : ಮಹತ್ವಾಕಾಂಕ್ಷೆ ಇಲ್ಲದ ಬುದ್ಧಿವಂತಿಕೆ ರೆಕ್ಕೆಗಳಿಲ್ಲದ ಹಕ್ಕಿಯಂತೆ.

# ಪಂಚಾಂಗ : ಗುರುವಾರ , 10-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಶಿಶಿರ ಋತು | ಮಾಘ  ಮಾಸ | ಶುಕ್ಲ ಪಕ್ಷ | ತಿಥಿ: ನವಮಿ| ನಕ್ಷತ್ರ: ರೋಹಿಣಿ| ಮಳೆ ನಕ್ಷತ್ರ: ಧನಿಷ್ಠ
* ಸೂರ್ಯೋದಯ : ಬೆ.06.44
* ಸೂರ್ಯಾಸ್ತ : 06.24
* ರಾಹುಕಾಲ : 1.30-3.00
* ಯಮಗಂಡ ಕಾಲ : 6.00-7.30
* ಗುಳಿಕ ಕಾಲ : 9.00-10.30
# ರಾಶಿಭವಿಷ್ಯ 
ಮೇಷ: ಪ್ರತಿಯೊಂದರಲ್ಲೂ ಅನುಮಾನ ಪಡುವುದನ್ನು ಬಿಡಿ. ಬೇರೆಯವರಿಗೆ ನೋವಾಗುವ ರೀತಿ ನಡೆದುಕೊಳ್ಳದಿರಿ.
ವೃಷಭ: ನಿಮಗೆ ಯಾರು ಸರಿ, ಯಾರು ತಪ್ಪು ಎಂದು ತಿಳಿದುಕೊಳ್ಳುವುದೇ ಕಷ್ಟವಾಗುತ್ತದೆ.
ಮಿಥುನ: ವಿದೇಶ ಪ್ರಯಾಣ ಮಾಡಬೇಕು ಎಂದಾದರೆ ಅಲ್ಪಾವಧಿ ಪ್ರಯಾಣ ಮಾಡಬಹುದು.
ಕಟಕ: ಅಡ್ಡದಾರಿಯಲ್ಲಿ ಹಣ ಮಾಡುವ ಆಲೋಚನೆ ಬಂದಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇರಿಸಿಕೊಳ್ಳುವುದು ಉತ್ತಮ.
ಸಿಂಹ: ಉದ್ಯೋಗ ಮಾಡುತ್ತಿರುವವರು ಇನ್ನೂ ಹೆಚ್ಚು ಎಚ್ಚರಿಕೆ ವಹಿಸಬೇಕು.
ಕನ್ಯಾ: ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಲಿರುವ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಮಾರ್ಗದರ್ಶನ ದೊರೆಯಲಿದೆ.
ತುಲಾ: ಸೈಟು- ಮನೆ, ಕಾರು ಖರೀದಿಗೆ ಅವಕಾಶ ಇದೆ. ಸಣ್ಣ ಪುಟ್ಟ ವಿಚಾರದಲ್ಲಿಯೂ ಕಾನೂನು ಮೀರದಿರಿ.
ವೃಶ್ಚಿಕ: ಸೋದರ- ಸೋದರಿಯರೊಂದಿಗೆ ಅಸಮಾಧಾನ ಇರುತ್ತದೆ. ಅನಾರೋಗ್ಯ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಾಡಬಹುದು.
ಧನುಸ್ಸು: ಮನೆ ನಿರ್ಮಾಣ ಕಾರ್ಯ ಆರಂಭಿಸುವುದಕ್ಕೆ ಉತ್ತಮ ಸಮಯವಾಗಿದೆ.
ಮಕರ: ತೀರ್ಥ ಕ್ಷೇತ್ರಗಳಿಗೆ ತಂದೆ- ತಾಯಿ ಯೊಂದಿಗೆ ತೆರಳುವಂಥ ಅವಕಾಶ ಸಿಗಲಿದೆ.
ಕುಂಭ: ಸ್ನೇಹಿತರನ್ನು ಕಳೆದುಕೊಳ್ಳಬೇಕಾಗುತ್ತದೆ. ನಿಮ್ಮ ಜತೆಗೆ ಹೊಸಬರು ಸೇರಲಿದ್ದಾರೆ.
ಮೀನ: ನೀವಾಗಿಯೇ ಯಾವ ಸಮಸ್ಯೆಯನ್ನೂ ಮೈಮೇಲೆ ಎಳೆದುಕೊಳ್ಳಬೇಡಿ. ಅದರಲ್ಲೂ ಮುಖ್ಯ ವಾಗಿ ಇತರರ ಸಾಲಕ್ಕೆ ಜಾಮೀನಾಗಿ ನಿಲ್ಲದಿರಿ.

Articles You Might Like

Share This Article