ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-03-2022)

Social Share

ನಿತ್ಯನೀತಿ : ಶಾಸ್ತ್ರದಲ್ಲಿ ದೋಷವಿದ್ದರೆ ಹೃದಯದಲ್ಲಿ ತಿದ್ದಬಹುದು. ಹೃದಯದಲ್ಲಿ ದೋಷವಿದ್ದರೆ ಶಾಸ್ತ್ರ ಏನು ಮಾಡುವುದು?
ಪಂಚಾಂಗ : ಗುರುವಾರ , 10-03-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ  ಪಕ್ಷ / ತಿಥಿ: ಅಷ್ಟಮಿ/ ನಕ್ಷತ್ರ: ರೋಹಿಣಿ/ ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.30
* ಸೂರ್ಯಾಸ್ತ : 06.30
* ರಾಹುಕಾಲ : 1.30-3.00
* ಯಮಗಂಡ ಕಾಲ : 6.00-7.30
* ಗುಳಿಕ ಕಾಲ : 9.00-10.30
# ರಾಶಿಭವಿಷ್ಯ :
ಮೇಷ: ದಿನದ ಆರಂಭ ಉತ್ತಮವಾಗಿರಲಿದೆ. ಕೈಗೊಂಡ ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗುತ್ತೀರಿ.
ವೃಷಭ: ಇತರರೊಂದಿಗೆ ಸೇರಿ ಮಾಡುವ ಕೆಲಸದಲ್ಲಿ ಉತ್ತಮ ಲಾಭ ದೊರೆಯಲಿದೆ.
ಮಿಥುನ: ನೆರೆಹೊರೆಯವರೊಂದಿಗಿನ ಸಂಬಂಧ ಸೌಹಾರ್ದಯುತವಾಗಿರುತ್ತದೆ.
ಕಟಕ: ಆರೋಗ್ಯ ಉತ್ತಮವಾಗಿರುತ್ತದೆ. ಸ್ನೇಹಿತರು ನೀವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುವರು.
ಸಿಂಹ: ಸಹೋದ್ಯೋಗಿ ಗಳೊಂದಿಗೆ ಮಾತುಕತೆ ನಡೆಸುವಾಗ ಪದಗಳನ್ನು ಎಚ್ಚರಿಕೆಯಿಂದ ಬಳಸಿ.
ಕನ್ಯಾ: ನಿಮ್ಮ ಉಜ್ವಲ ಭವಿಷ್ಯಕ್ಕೆ ಹೊಸ ಸ್ನೇಹ ಸಹಕಾರಿಯಾಗಲಿದೆ.
ತುಲಾ: ಅನೇಕ ಜನ ರೊಂದಿಗೆ ಸಂಭಾಷಣೆ ನಡೆಸುವುದರಿಂದ ಉತ್ತಮ ರೀತಿಯ ಸಂಬಂಧಗಳು ರೂಪುಗೊಳ್ಳುತ್ತವೆ.
ವೃಶ್ಚಿಕ: ಹಿಂದೆ ಎದುರಿಸಿದ ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ಸ್ಥಗಿತಗೊಂಡ ಕೆಲಸ-ಕಾರ್ಯಗಳು ಸಹ ಪ್ರಗತಿಯಾಗುತ್ತವೆ.
ಧನುಸ್ಸು: ಶ್ರಮ ಮತ್ತು ಅದೃಷ್ಟ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ. ಹಣಕಾಸಿನ ಪರಿಸ್ಥಿತಿ ಬಹಳ ಉತ್ತಮವಾಗಿರುತ್ತದೆ.
ಮಕರ: ಹಿರಿಯರು ಹಾಗೂ ಸಜ್ಜನರನ್ನು ಗೌರವಿಸುವಿರಿ. ಉತ್ತಮ ಪ್ರಗತಿ ಸಾಧಿಸುವಿರಿ.
ಕುಂಭ: ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತೀರಿ.
ಮೀನ: ಹೊಸ ಉದ್ಯೋಗಗಳು ಮತ್ತು ಉದ್ಯೋಗ ಬದಲಾವಣೆಗೆ ಇದು ಉತ್ತಮ ದಿನವಾಗಿದೆ.

Articles You Might Like

Share This Article