ನಿತ್ಯ ನೀತಿ : ಕೆಟ್ಟ ಕರ್ಮಗಳಿಗಷ್ಟೇ ಶಿಕ್ಷೆಯಾಗುವುದಿಲ್ಲ, ಅಳತೆ ಮೀರಿದ ಒಳ್ಳೆಯತನಕ್ಕೂ ಕೆಲವೊಮ್ಮೆ ಶಿಕ್ಷೆಯಾಗುತ್ತದೆ.
ಪಂಚಾಂಗ : ಭಾನುವಾರ, 10-07-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ/ ನಕ್ಷತ್ರ: ವಿಶಾಖಾ/ ಮಳೆ ನಕ್ಷತ್ರ: ಪುನರ್ವಸು
* ಸೂರ್ಯೋದಯ : ಬೆ.06.00
* ಸೂರ್ಯಾಸ್ತ : 06.50
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30
#ರಾಶಿ ಭವಿಷ್ಯ :
ಮೇಷ: ಸ್ನೇಹಿತರಿಂದ ನಿರೀಕ್ಷಿತ ಸಹಕಾರ ಸಿಗುವುದಿಲ್ಲ. ಮಾತಿಗೆ ಮಾತು ಬೆಳೆಸಬೇಡಿ.
ವೃಷಭ: ನಿಮ್ಮ ಅಹಂಕಾರದಿಂದಾಗಿ ಹಣಕಾಸು ನಷ್ಟ ಅನುಭವಿಸಲಿದ್ದೀರಿ. ಸಾಲಗಾರರ ಒತ್ತಡ ಹೆಚ್ಚಾಗಲಿದೆ.
ಮಿಥುನ: ಕಾನೂನು ತೊಡಕು ಎದುರಿಸಬೇಕಾದ ಸಂದರ್ಭ ಬರಬಹುದು. ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ.
ಕಟಕ: ಸಂಗಾತಿಯ ಬೇಡಿಕೆಗಳು ನಿಮಗೆ ಸ್ವಲ್ಪ ಒತ್ತಡ ಉಂಟುಮಾಡಬಹುದು.
ಸಿಂಹ: ಪ್ರೇಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಉತ್ತಮ ದಿನ.
ಕನ್ಯಾ: ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ ಅವಕಾಶಗಳು ಒದಗಿ ಬರಲಿವೆ.
ತುಲಾ: ಆದಷ್ಟು ಹೊಸ ವ್ಯವಹಾರ ಆರಂಭಿಸುವುದನ್ನು ತಪ್ಪಿಸಿದರೆ ಒಳಿತು.
ವೃಶ್ಚಿಕ: ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಧನುಸ್ಸು: ಆರ್ಥಿಕ ಜೀವನದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು.
ಮಕರ: ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಿ ಹಾಗೂ ಉಳಿತಾಯದತ್ತ ಗಮನ ಹರಿಸಿ.
ಕುಂಭ: ಮನೆಗೆ ಬಂದ ಅತಿಥಿಗಳು ನಿಮ್ಮ ಮನೆಯಲ್ಲೇ ಉಳಿದು ಕೊಳ್ಳುತ್ತಾರೆ.
ಮೀನ: ವೈದ್ಯಕೀಯ ವೆಚ್ಚಗಳು ವಿಪರೀತವಾಗಲಿವೆ. ನಿಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ.
