ನಿತ್ಯ ನೀತಿ : ಹೃದಯ ಎಲ್ಲರಿಗೂ ಇರುತ್ತದೆ. ಆದರೆ, ಹೃದಯವಂತಿಕೆ ಎಷ್ಟು ಜನರಿಗೆ ಇರುತ್ತದೆ?
ಪಂಚಾಂಗ: ಮಂಗಳವಾರ , 11-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಶುಕ್ಲ ಪಕ್ಷ | ತಿಥಿ: ನವಮಿ| ನಕ್ಷತ್ರ: ಅಶ್ವಿನಿ | ಮಳೆ ನಕ್ಷತ್ರ: ಉತ್ತರಾಷಾಢ
* ಸೂರ್ಯೋದಯ : ಬೆ.06.45
* ಸೂರ್ಯಾಸ್ತ : 06.10
* ರಾಹುಕಾಲ : 3.00-4.30
* ಯಮಗಂಡ ಕಾಲ : 9.00-10.30
* ಗುಳಿಕ ಕಾಲ : 12.00-1.30
#ಇಂದಿನ ಭವಿಷ್ಯ :
ಮೇಷ: ಮೇಲಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆಗಳಿವೆ. ಕಚೇರಿಯ ಕೆಲಸ-ಕಾರ್ಯಗಳಲ್ಲಿ ಅಸಡ್ಡೆ ತೋರದೆ ಎಚ್ಚರಿಕೆಯಿಂದ ನಿರ್ವಹಿಸಿ.
ವೃಷಭ: ನೀವು ಮಾಡುವ ಕಾರ್ಯಗಳಿಗೆ ಸಂಗಾತಿಯ ಸಕಾಲಿಕ ನೆರವು ದೊರೆಯಲಿದೆ.
ಮಿಥುನ: ಉದ್ವೇಗಕ್ಕೆ ಒಳಗಾಗದೆ ಶಾಂತ ರೀತಿಯಲ್ಲಿ ವರ್ತಿಸುವುದರಿಂದ ಪರಿಹಾರ ದೊರೆಯಲಿದೆ.
ಕಟಕ: ನಿಮ್ಮ ಯೋಜನೆಗಳಿಂದ ಇತರರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಸಿಂಹ: ಉತ್ತಮವಾದ ಕೆಲಸವೊಂದನ್ನು ಹಮ್ಮಿಕೊಂಡಿದ್ದಲ್ಲಿ ಹಿರಿಯರ ಆಶೀರ್ವಾದ ಪಡೆದು ಮುನ್ನಡೆಯುವುದು ಒಳಿತು.
ಕನ್ಯಾ: ಹಠದಿಂದಾಗಿ ಮನೆಯವರ ತಿರಸ್ಕಾರಕ್ಕೆ ಒಳಗಾಗುವ ಸಾಧ್ಯತೆಗಳಿವೆ.
ತುಲಾ: ಗೃಹಿಣಿಯ ಆಸೆ ಪೂರೈಸಲು ಪ್ರಯತ್ನಿಸುವುದ ರಿಂದ ಆಕೆಯ ಮೆಚ್ಚುಗೆಗೆ ಪಾತ್ರರಾಗುವಿರಿ.
ವೃಶ್ಚಿಕ: ದೂರದ ಬಂಧುಗಳು ಆಗಮಿಸುವ ಸಾಧ್ಯತೆ ಗಳಿವೆ. ಹಣಕಾಸು ವಿಚಾರದಲ್ಲಿ ಎಚ್ಚರವಿರಲಿ.
ಧನುಸ್ಸು: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ದೊರೆತು ಆತ್ಮವಿಶ್ವಾಸ ಹೆಚ್ಚಾಗಲಿದೆ.
ಮಕರ: ಕೌಟುಂಬಿಕ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ. ಪತ್ನಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಒಳಿತು.
ಕುಂಭ: ನೀವು ಮಾಡುವ ಕೆಲಸಗಳು ಇತರರಿಗೆ ಅನು ಕೂಲವಾಗುವುದರಿಂದ ಮನಸ್ಸಿಗೆ ಸಂತಸವಾಗಲಿದೆ.
ಮೀನ: ನಿಷ್ಕಲ್ಮಶ ಮನಸ್ಸಿನಿಂದ ವರ್ತಿಸುವುದರಿಂದ ಜನಮನ್ನಣೆ ಗಳಿಸಿ ಇತರರಿಗೆ ಮಾದರಿಯಾಗುವಿರಿ.
