ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-08-2022)

Social Share

ನಿತ್ಯ ನೀತಿ : ನಿಮ್ಮನ್ನು ನೀವು ಜಯಿಸಿ. ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

ಪಂಚಾಂಗ : ಗುರುವಾರ, 11-08-2022

ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಉತ್ತರಾಷಾಢ / ಮಳೆ ನಕ್ಷತ್ರ: ಆಶ್ಲೇಷ

ಸೂರ್ಯೋದಯ : ಬೆ.06.07
ಸೂರ್ಯಾಸ್ತ : 06.43
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ಇಂದಿನ ಭವಿಷ್ಯ

ಮೇಷ: ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಅಲೆದಾಟ ಮಾಡಬೇಕಾಗಬಹುದು.
ವೃಷಭ: ಪ್ರತಿಯೊಂದರಲ್ಲೂ ಯಶಸ್ಸು ಕಾಣಲು ಬಯಸುವ ನೀವು ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ.
ಮಿಥುನ: ಕಷ್ಟಪಟ್ಟು ಆರಂಭಿಸಿದ ವ್ಯವಹಾರದ ಕಡೆ ವಿಶೇಷ ಗಮನ ಹರಿಸುವುದು ಒಳಿತು.
ಕಟಕ: ವಿದ್ಯಾರ್ಥಿಗಳಿಗೆ ಬುದ್ಧಿ ವಿಕಾಸಕ್ಕೆ ಬೇಕಾದ ವಾತಾವರಣ ಉತ್ತಮ ಫಲ ನೀಡಲಿದೆ.
ಸಿಂಹ: ನಿಮ್ಮ ಸ್ವಭಾವದಲ್ಲಿ ಬದಲಾವಣೆಯಾಗ ಬೇಕು. ತಾಳ್ಮೆ- ಸಂಯಮ ತಂದುಕೊಳ್ಳಬೇಕು.
ಕನ್ಯಾ: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ.
ತುಲಾ: ವೈಯಕ್ತಿಕವಾಗಿ ದೈಹಿಕ, ಮಾನಸಿಕ ಸಮ ತೋಲನ ಕಾಪಾಡಿಕೊಳ್ಳಬೇಕು.
ವೃಶ್ಚಿಕ: ಆರೋಗ್ಯ ಸಮಸ್ಯೆಗಳು ಎದುರಾಗ ಬಹುದು. ಸೂಕ್ತ ಸಮಯಕ್ಕೆ ವೈದ್ಯರ ಸಲಹೆ ಪಡೆಯಿರಿ.
ಧನುಸ್ಸು: ಸಂಗಾತಿಯಿಂದ ಸ್ವಲ್ಪ ಮಟ್ಟಿಗೆ ನಷ್ಟವಾಗುತ್ತದೆ. ಯಾವುದೇ ಕಾರಣಕ್ಕೂ ಕೆಲಸ ಬಿಡುವಂತಹ ನಿರ್ಧಾರ ಮಾಡದಿರಿ.
ಮಕರ: ಉದ್ಯೋಗದಲ್ಲಿ ನಿರೀಕ್ಷಿತ ರೀತಿಯಲ್ಲಿ ಪ್ರಗತಿ ಸಾಸಲು ಸಾಧ್ಯವಾಗುವುದಿಲ್ಲ.
ಕುಂಭ: ಶತ್ರುಗಳ ಕಾಟ ಇರುತ್ತದೆ. ಆದರೆ ಅವರು ನಿಮ್ಮನ್ನು ಏನೂ ಮಾಡಲು ಆಗುವುದಿಲ್ಲ.
ಮೀನ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ಒದಗುತ್ತವೆ.

Articles You Might Like

Share This Article