ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-01-2022)

Social Share

ನಿತ್ಯ ನೀತಿ : ಸಂಬಂಧದಲ್ಲಿ ಪರಸ್ಪರ ಸಹಾನುಭೂತಿ ಇದ್ದರೆ, ಬದುಕು ಸುಲಲಿತವಾಗಿ ಸಾಗುತ್ತದೆ.
ಪಂಚಾಂಗ: ಬುಧವಾರ , 12-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಶುಕ್ಲ ಪಕ್ಷ | ತಿಥಿ: ದಶಮಿ| ನಕ್ಷತ್ರ: ಭರಣಿ| ಮಳೆ ನಕ್ಷತ್ರ: ಉತ್ತರಾಷಾಢ
* ಸೂರ್ಯೋದಯ : ಬೆ.06.45
* ಸೂರ್ಯಾಸ್ತ : 06.12
* ರಾಹುಕಾಲ : 12.00-1.30
* ಯಮಗಂಡ ಕಾಲ : 7.30-9.00
* ಗುಳಿಕ ಕಾಲ : 10.30-12.00
#ಇಂದಿನ ಭವಿಷ್ಯ :
ಮೇಷ: ವ್ಯಾಪಾರದಲ್ಲಿ ಮತ್ತು ಶೈಕ್ಷಣಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ. ಅನುಭವಿ ವ್ಯಕ್ತಿಯ ಸಹಾಯ ಸಿಗಲಿದೆ.
ವೃಷಭ: ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ಅದು ದೊರೆಯಲಿದೆ. ಹಣದ ಹರಿವು ಹೆಚ್ಚಾಗಲಿದೆ.
ಮಿಥುನ: ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಸಾಲ ಪಡೆಯಿರಿ. ಯಾರೊಂದಿಗೂ ವಾಗ್ವಾದಕ್ಕಿಳಿಯದಿರಿ.
ಕಟಕ: ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದರೆ ಒಳಿತಾಗಲಿದೆ.
ಸಿಂಹ: ಯಾವುದೇ ಕೆಲಸ ಮಾಡುವುದಾದರೂ ಅಗತ್ಯಕ್ಕಿಂತ ಹೆಚ್ಚು ಶ್ರಮ ಹಾಕಬೇಕಾಗುತ್ತದೆ.
ಕನ್ಯಾ: ಪ್ರೀತಿಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.
ತುಲಾ: ಪ್ರಮುಖ ಕೆಲಸಗಳು ನಿಲ್ಲಬಹುದು. ಅಂತಹ ಸಂದರ್ಭದಲ್ಲಿ ಹಿರಿಯರ ಸಲಹೆ ಪಡೆಯಿರಿ.
ವೃಶ್ಚಿಕ: ಪತ್ನಿಯ ಮನಸ್ಥಿತಿ ತುಂಬಾ ಉತ್ತಮ ವಾಗಿರುತ್ತದೆ. ಮಕ್ಕಳಿಂದ ಸಂತಸ ಸಿಗಲಿದೆ.
ಧನುಸ್ಸು: ಸಾಮಾಜಿಕ ಮಟ್ಟದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ಗಣ್ಯರನ್ನು ಭೇಟಿಯಾಗುವಿರಿ.
ಮಕರ: ದಾಯಾದಿಯಿಂದ ಲಾಭವಾಗುವ ಸಂಭವವಿದೆ. ಆದರೂ ಎಚ್ಚರಿಕೆಯಿಂದ ಇರಿ.
ಕುಂಭ: ಮಕ್ಕಳ ಬಗೆಗಿನ ಇದ್ದ ಚಿಂತೆಗಳೆಲ್ಲವೂ ದೂರವಾಗುವ ಸಾಧ್ಯತೆಗಳಿವೆ.
ಮೀನ: ಮಾತನಾಡುವ ಎಚ್ಚರಿಕೆಯಿಂದಿರಿ. ನಿಮ್ಮ ಮಾತುಗಳಿಂದ ಯಾರಿಗೂ ನೋವಾಗಬಾರದು.

Articles You Might Like

Share This Article