ನಿತ್ಯ ನೀತಿ :ನೀವು ಯಾರಿಗಾದರೂ ಏನಾದರೂ ಸಹಾಯ ಮಾಡಿದ್ದರೆ ಅದನ್ನು ಎಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳಬೇಡಿ. ಯಾರಾದರೂ ನಿಮಗೆ ಏನಾದರೂ ಸಹಾಯ ಮಾಡಿದ್ದರೆ ಅದನ್ನು ಎಂದಿಗೂ ಮರೆಯಬೇಡಿ.
# ಪಂಚಾಂಗ : ಶನಿವಾರ , 12-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಶಿಶಿರ ಋತು | ಮಾಘ ಮಾಸ | ಶುಕ್ಲ ಪಕ್ಷ | ತಿಥಿ: ಏಕಾದಶಿ| ನಕ್ಷತ್ರ: ಆರಿದ್ರಾ| ಮಳೆ ನಕ್ಷತ್ರ: ಧನಿಷ್ಠ
* ಸೂರ್ಯೋದಯ : ಬೆ.06.43
* ಸೂರ್ಯಾಸ್ತ : 06.25
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30
# ರಾಶಿಭವಿಷ್ಯ
ಮೇಷ: ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರೀತಿಪಾತ್ರರು ಸಂಪೂರ್ಣವಾಗಿ ಬೆಂಬಲ ನೀಡುವರು.
ವೃಷಭ: ಸಂಗಾತಿಯೊಂದಿಗಿನ ಬಾಂಧವ್ಯ ಹಾಳಾಗಬಹುದು. ಜಗಳಗಳಿಂದ ದೂರವಿರಿ,
ಮಿಥುನ: ಉತ್ತಮ ಫಲ ದೊರೆಯಲಿದೆ. ಆದರೆ, ಅತಿಯಾದ ಆತ್ಮವಿಶ್ವಾಸ ಹೊಂದುವುದು ಬೇಡ.
ಕಟಕ: ಸಣ್ಣ ಕೆಲಸಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣವನ್ನು ಸಹ ಮಾಡಬೇಕಾಗಬಹುದು.
ಸಿಂಹ: ಸರ್ಕಾರಿ ನೌಕರಿ ಮಾಡುವವರ ಆದಾಯ ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಕನ್ಯಾ: ಕೆಲಸದ ಹೊರೆ ಕಡಿಮೆಯಾಗುತ್ತದೆ. ಕುಟುಂಬ ಸದಸ್ಯರಿಗಾಗಿ ಸಮಯ ಮಾಡಿಕೊಳ್ಳುವಿರಿ.
ತುಲಾ: ಮನೆಯಲ್ಲಿ ಅನೇಕ ಧನಾತ್ಮಕ ಬದಲಾವಣೆಗಳು ನಡೆಯಬಹುದು.
ವೃಶ್ಚಿಕ: ವಿಮಾ ಪಾಲಿಸಿ ಅಥವಾ ಸಣ್ಣ ಹೂಡಿಕೆಯು ನಿಮಗೆ ಪ್ರಯೋಜನಕಾರಿಯಾಗಿದೆ.
ಧನುಸ್ಸು: ಅವಿವಾಹಿತರಿಗೆ ಮದುವೆ ಪ್ರಸ್ತಾಪ ಬರ ಬಹುದು. ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಿ.
ಮಕರ: ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರುವಂತಹ ಯಾವುದೇ ಕೆಲಸ ಮಾಡದಂತೆ ಎಚ್ಚರಿಕೆ ವಹಿಸಿರಿ.
ಕುಂಭ: ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿ ಉಳಿಯುವ ಸಾಧ್ಯತೆಯಿದೆ.
ಮೀನ: ಕೆಲವು ಹಳೆ ಸಮಸ್ಯೆಗಳು ಮತ್ತೊಮ್ಮೆ ಮರು ಕಳಿಸುವುದರಿಂದ ಅಸಮಾಧಾನ ಉಂಟಾಗಬಹುದು.
