ನಿತ್ಯ ನೀತಿ : ಇತರರು ತನ್ನತ್ತ ಎಸೆದ ಇಟ್ಟಿಗೆಗಳಿಂದ ತನ್ನ ಬದುಕಿಗೆ ದೃಢವಾದ ಅಡಿಪಾಯವನ್ನು ಹಾಕಿಕೊಳ್ಳುವವನೇ ನಿಜವಾದ ಯಶಸ್ವಿ ವ್ಯಕ್ತಿ.
ಪಂಚಾಂಗ: ಗುರುವಾರ , 13-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಶುಕ್ಲ ಪಕ್ಷ | ತಿಥಿ: ಏಕಾದಶಿ| ನಕ್ಷತ್ರ: ಕೃತ್ತಿಕಾ| ಮಳೆ ನಕ್ಷತ್ರ: ಉತ್ತರಾಷಾಢ
* ಸೂರ್ಯೋದಯ : ಬೆ.06.45
* ಸೂರ್ಯಾಸ್ತ : 06.11
* ರಾಹುಕಾಲ : 1.30-3.00
* ಯಮಗಂಡ ಕಾಲ : 6.00-7.30
* ಗುಳಿಕ ಕಾಲ : 9.00-10.30
#ಇಂದಿನ ಭವಿಷ್ಯ :
ಮೇಷ: ಒಡಹುಟ್ಟಿದವರಿಂದ ಹಣಕಾಸಿನ ನೆರವು ಪಡೆಯುವ ಸಾಧ್ಯತೆಯಿರುವುದರಿಂದ ಹಣಕಾಸಿನ ನಿರ್ಬಂಧಗಳ ಬಗ್ಗೆ ಚಿಂತಿಸಬೇಕಾಗಿಲ್ಲ.
ವೃಷಭ:ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಪಡೆಯಲು ಮೊದಲಿಗಿಂತ ಹೆಚ್ಚು ಕಠಿಣ ಪರಿಶ್ರಮ ಪಡಬೇಕಾಗುತ್ತದೆ.
ಮಿಥುನ: ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಪಾರ ಯಶಸ್ಸು ಪಡೆಯುತ್ತಾರೆ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವಿರಿ.
ಕಟಕ: ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳಾಗ ಬಹುದು ಆದರೆ ಚಿಂತೆ ಪಡುವ ಅಗತ್ಯವಿಲ್ಲ.
ಸಿಂಹ: ಕೌಟುಂಬಿಕ ಜೀವನದಲ್ಲಿ ಅನೇಕ ರೀತಿಯ ಏರಿಳಿತಗಳನ್ನು ಸೃಷ್ಟಿಸಬಲ್ಲದು.
ಕನ್ಯಾ: ಆರೋಗ್ಯದತ್ತ ವಿಶೇಷ ಕಾಳಜಿ ವಹಿಸುವ ಮೂಲಕ, ಆಹಾರ ಪದ್ಧತಿ ಬಗ್ಗೆ ಗಮನ ಹರಿಸಬೇಕು.
ತುಲಾ: ದೈಹಿಕ ಶಕ್ತಿ ಹೆಚ್ಚಾಗುತ್ತದೆ, ಮಾನಸಿಕವಾಗಿ ಸದೃಢರಾಗುತ್ತೀರಿ.
ವೃಶ್ಚಿಕ: ಉತ್ತಮ ಫಲ ದೊರೆಯಲಿದೆ. ಆದರೆ, ಅತಿಯಾದ ಆತ್ಮವಿಶ್ವಾಸ ಹೊಂದುವುದು ಬೇಡ.
ಧನುಸ್ಸು: ಹಣಕಾಸಿಗೆ ಸಂಬಂಧಿಸಿದ ಏರಿಳಿತ ಉಂಟಾಗ ಲಿದೆ. ಕಷ್ಟಗಳು ಸುಲಭವಾಗಿ ದೂರವಾಗಲಿವೆ.
ಮಕರ: ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ಕುಂಭ: ಶೀತ, ಕೆಮ್ಮು ಇತ್ಯಾದಿಗಳಂತಹ ಅರೋಗ್ಯ ಸಮಸ್ಯೆಗಳು ಎದುರಾಗಬಹುದು.
ಮೀನ: ಶಿಕ್ಷಣ ಕ್ಷೇತ್ರದಲ್ಲಿ ಅಪೇಕ್ಷಿತ ಫಲಿತಾಂಶ ಗಳನ್ನು ಪಡೆಯಲು ಸಾಧ್ಯವಾಗುತ್ತದೆ.
