ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-11-2022)

Social Share

ನಿತ್ಯ ನೀತಿ : ಒಬ್ಬ ವ್ಯಕ್ತಿಯ ಮೇಲಿನ ನಿಜವಾದ ಪ್ರೀತಿ ನಿಮ್ಮ ಕೋಪವನ್ನು ಅಳಿಸಿಹಾಕುತ್ತದೆ.
ಪಂಚಾಂಗ : ಭಾನುವಾರ, 13-11-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಆರಿದ್ರಾ / ಮಳೆ ನಕ್ಷತ್ರ: ವಿಶಾಖ
ಸೂರ್ಯೋದಯ : ಬೆ.06.17
ಸೂರ್ಯಾಸ್ತ : 05.50
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ಇಂದಿನ ರಾಶಿಭವಿಷ್ಯ
ಮೇಷ:
ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಹಿತಶತ್ರುಗಳ ಕಾಟ ತಪ್ಪುವುದು.
ವೃಷಭ: ಐಷಾರಾಮಿ ಜೀವನ ನಿರ್ವಹಣೆ ಮಾಡುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ.
ಮಿಥುನ: ಮನೆಗೆ ಬಂದ ಅತಿಥಿಗಳು ನಿಮ್ಮ ಮನೆಯಲ್ಲೇ ಉಳಿದುಕೊಳ್ಳುವರು.

ಯುವ ಜನಾಂಗಕ್ಕೆ ಮಾರಕವಾಗಲು ಹೃದಯಘಾತ ಇಲ್ಲಿದೆ ಹಲವು ಕಾರಣ
ಕಟಕ: ತಾಳ್ಮೆಯಿಂದ ಕೆಲಸ- ಕಾರ್ಯಗಳನ್ನು ಮುಗಿಸುವಿರಿ.

ಸಿಂಹ: ವೃತ್ತಿಪರ ಜೀವನ ಅದ್ಭುತವಾಗಿರುತ್ತದೆ.
ಕನ್ಯಾ: ಕೌಟುಂಬಿಕ ವಿಷಯದಲ್ಲಿ ಗಂಭೀರ ವಿವಾದ, ಘರ್ಷಣೆಗಳು ನಡೆಯಬಹುದು.
ತುಲಾ: ಕೆಲಸಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಅಕಾರಿ ಗಳಿಂದ ಸಂದೇಶ ಬರಲಿದೆ. ಜನಮನ್ನಣೆ ಗಳಿಸುವಿರಿ.

ವೃಶ್ಚಿಕ: ನಿಮ್ಮ ಹಾಸ್ಯದಿಂದ ಬೇರೆಯವರಿಗೆ ನೋವುಂಟಾಗದಂತೆ ನೋಡಿಕೊಳ್ಳಿ.
ಧನುಸ್ಸು: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ಮಕರ: ಬ್ಯಾಂಕ್ ಉದ್ಯೋಗಕ್ಕಾಗಿ ಮಾಡಿದ ಪ್ರಯತ್ನ ವ್ಯರ್ಥವಾಗಲಿದೆ.

ಕುಂಭ: ಹೂವು, ಹಣ್ಣು ವ್ಯಾಪಾರದಲ್ಲಿ ವಿಶೇಷ ಲಾಭ ದೊರೆಯಲಿದೆ. ತಾಳ್ಮೆಯಿಂದ ಇರಿ.
ಮೀನ: ಸಹೋದ್ಯೋಗಿಗಳು ಗೌರವಾನ್ವಿತವಾಗಿ ವರ್ತಿಸುವುದರಿಂದ ಕೆಲಸ ಸರಾಗವಾಗಿ ಸಾಗಲಿದೆ.

Articles You Might Like

Share This Article