ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-01-2022)

Social Share

ನಿತ್ಯ ನೀತಿ : ಸಂಕಷ್ಟ ಇಲ್ಲದಿದ್ದರೆ ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯುವುದಿಲ್ಲ.
ಪಂಚಾಂಗ: ಶುಕ್ರವಾರ , 14-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಶುಕ್ಲ ಪಕ್ಷ | ತಿಥಿ: ದ್ವಾದಶಿ| ನಕ್ಷತ್ರ: ರೋಹಿಣಿ| ಮಳೆ ನಕ್ಷತ್ರ: ಉತ್ತರಾಷಾಢ
* ಸೂರ್ಯೋದಯ : ಬೆ.06.45
* ಸೂರ್ಯಾಸ್ತ : 06.12
* ರಾಹುಕಾಲ : 1.30-12.00
* ಯಮಗಂಡ ಕಾಲ : 3.00-4.30
* ಗುಳಿಕ ಕಾಲ : 7.30-9.00
#ಇಂದಿನ ಭವಿಷ್ಯ :
ಮೇಷ: ಆರ್ಥಿಕ ನಷ್ಟದೊಂದಿಗೆ ಅನೇಕ ಅರೋಗ್ಯ ಸಂಬಂಧಿತ ಸಮಸ್ಯೆಗಳು ಮತ್ತು ಕಷ್ಟಗಳನ್ನು ಎದುರಿಸಬೇಕಾದ ಸಂದರ್ಭಗಳು ಬರಬಹುದು.
ವೃಷಭ: ನಿಮ್ಮ ಪ್ರೀತಿಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಿ.
ಮಿಥುನ: ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು ಸಾಧಿಸುವಿರಿ. ವಿದ್ಯಾರ್ಥಿಗಳು ಧನಾತ್ಮಕವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಕಟಕ: ವಿದ್ಯಾರ್ಥಿಗಳು ವಿದೇಶದಲ್ಲಿ ತಮ್ಮ ಕೋರ್ಸ್ ಗಳಿಗೆ ಹೆಚ್ಚಿನ ಶುಲ್ಕವನ್ನು ವ್ಯಯಿಸಬೇಕಾಗಬಹುದು.
ಸಿಂಹ: ಸಂಗಾತಿ ಹಾಗೂ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯಲು ಬಯಸುವಿರಿ.
ಕನ್ಯಾ: ಅವಿವಾಹಿತರಿಗೆ ಮದುವೆಯ ಪ್ರಸ್ತಾಪ ಬರಬಹುದು.
ತುಲಾ: ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರೀತಿಪಾತ್ರರು ಸಂಪೂರ್ಣವಾಗಿ ಬೆಂಬಲ ನೀಡುವರು.
ವೃಶ್ಚಿಕ: ಉತ್ತಮ ಫಲ ದೊರೆಯಲಿದೆ. ಆದರೆ, ಅತಿಯಾದ ಆತ್ಮವಿಶ್ವಾಸ ಹೊಂದುವುದು ಬೇಡ.
ಧನುಸ್ಸು: ಕೆಲಸದ ಹೊರೆ ಕಡಿಮೆಯಾಗುತ್ತದೆ. ಕುಟುಂಬ ಸದಸ್ಯರಿಗಾಗಿ ಸಮಯ ಮಾಡಿಕೊಳ್ಳುವಿರಿ.
ಮಕರ: ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಿ.
ಕುಂಭ: ಸರ್ಕಾರಿ ನೌಕರಿ ಮಾಡುವವರ ಆದಾಯ ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಮೀನ: ವಿಮಾ ಪಾಲಿಸಿ ಅಥವಾ ಸಣ್ಣ ಹೂಡಿಕೆಯು ನಿಮಗೆ ಪ್ರಯೋಜನಕಾರಿಯಾಗಿದೆ.

Articles You Might Like

Share This Article