ನಿತ್ಯ ನೀತಿ : ಇತರರಿಗಾಗಿ ಯಾರು ಮರುಗುತ್ತಾರೋ ಅವರೇ ನಿಜವಾಗಿ ಬದುಕಿರುವವರು. ಉಳಿದವರು ಬದುಕಿದ್ದೂ ಸತ್ತಂತೆ.
ಪಂಚಾಂಗ : ಮಂಗಳವಾರ , 14-02-2023
ಶುಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಅನುರಾಧಾ / ಯೋಗ: ಧ್ರುವ / ಕರಣ: ತೈತಿಲ
ಸೂರ್ಯೋದಯ : ಬೆ.06.43
ಸೂರ್ಯಾಸ್ತ : 06.25
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30
ಇಂದಿನ ರಾಶಿಭವಿಷ್ಯ :
ಮೇಷ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.
ವೃಷಭ: ಅಪರೂಪದ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ಮಿಥುನ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳ ದಿರಿ. ಹಿತಶತ್ರುಗಳಿಂದ ದೂರವಿದ್ದರೆ ಒಳಿತು.
ಕಟಕ: ಎಲ್ಲ ಕೆಲಸ-ಕಾರ್ಯಗಳಿಗೂ ವಿರಾಮ ಹೇಳಿ ಪತ್ನಿ-ಮಕ್ಕಳೊಂದಿಗೆ ಸಮಯ ಕಳೆಯಿರಿ.
ಸಿಂಹ: ಸ್ನೇಹ-ಸಂಬಂಧಗಳು ಗಟ್ಟಿಯಾಗಿ ಅವರಿಂದ ಸಹಾಯ-ಸಹಕಾರ ದೊರೆಯಲಿದೆ.
ಕನ್ಯಾ: ನಕಾರಾತ್ಮಕವಾಗಿ ಮಾತ ನಾಡುವ ಜನರಿಂದ ದೂರ ವಿರುವುದು ಬಹಳ ಒಳ್ಳೆಯದು.
ತುಲಾ: ಕಚೇರಿಯಲ್ಲಿ ಯಾವುದೇ ಅಡಚಣೆ ಯಾಗದೆ ಎಲ್ಲವೂ ಸುಲಭವಾಗಿ ನೆರವೇರಲಿವೆ.
ವೃಶ್ಚಿಕ: ಕೆಲಸದ ಸ್ಥಳದಲ್ಲಿ ನಿಮ್ಮ ಗಮನಕ್ಕೆ ಬರುವ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ.
ಧನುಸ್ಸು: ವಿದ್ಯಾರ್ಥಿಗಳು ಓದಿನಲ್ಲಿ ವಿಶೇಷ ಪ್ರಗತಿ ಕಾಣುವರು. ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮಕರ: ಹೂವು, ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಅಲ್ಪ ಪ್ರಮಾಣದ ಲಾಭ ಸಿಗಲಿದೆ.
ಕುಂಭ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ. ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಮೀನ: ತಂತ್ರಜ್ಞರು ಮತ್ತು ಕುಶಲ ಕರ್ಮಿಗಳ ಬೇಡಿಕೆಗಳು ಹೆಚ್ಚಾಗಲಿವೆ. ದೂರ ಪ್ರಯಾಣ ಬೇಡ.