ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-05-2022)

ನಿತ್ಯ ನೀತಿ : ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಬಯಸಿದರೂ ಅವರು ಅವರ ಯೋಗ್ಯತೆಯನ್ನು ತೋರಿಸುತ್ತಲೇ ಇರುತ್ತಾರೆ. ನಿಮ್ಮಲ್ಲಿರುವ ಒಳ್ಳೆಯತನ ಎಂದೂ ಹಾಳಾಗದೆ ಇರಲಿ. ತಾಳ್ಮೆಯೂ ತುಂಬಿರಲಿ. ಅವರ ಯೋಗ್ಯತೆಯೇ ಅವರಿಗೆ ಒಂದು ದಿನ ತಕ್ಕ ಪಾಠ ಕಲಿಸುತ್ತದೆ.

# ಪಂಚಾಂಗ : ಶನಿವಾರ , 14-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಶುಕ್ಲ ಪಕ್ಷ / ತಿಥಿ: ತ್ರಯೋದಶಿ/ ನಕ್ಷತ್ರ: ಚಿತ್ತಾ/ಮಳೆ ನಕ್ಷತ್ರ: ಕೃತ್ತಿಕಾ

* ಸೂರ್ಯೋದಯ : ಬೆ.5.55
* ಸೂರ್ಯಾಸ್ತ : 06.38
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30

# ಇಂದಿನ ರಾಶಿ ಭವಿಷ್ಯ : 
ಮೇಷ: ದೂರ ಪ್ರಯಾಣ ಮಾಡುವುದರಿಂದ ಲಾಭ ಸಿಗಲಿದೆ. ಆದರೂ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.
ವೃಷಭ: ಹಣಕಾಸಿನ ಪ್ರಯೋಜನ ಪಡೆಯಲು ನೀವು ಹೊಸ ಮಾರ್ಗಗಳನ್ನು ಸಹ ಕಂಡುಕೊಳ್ಳುವಿರಿ.
ಮಿಥುನ: ಹಿರಿಯರು ಮತ್ತು ಸಜ್ಜನರ ಮಾತನ್ನು ಕೇಳಿ ಕೆಲಸ ಪ್ರಾರಂಭಿಸುವುದು ಒಳಿತು.

ಕಟಕ: ನೀವು ಮಾಡುವ ಕೆಲಸಗಳಿಗೆ ಉನ್ನತ ಅಧಿಕಾರಿಗಳ ಸಂಪೂರ್ಣ ಸಹಕಾರ ಸಿಗಲಿದೆ.
ಸಿಂಹ: ಎಚ್ಚರಿಕೆಯ ಹೆಜ್ಜೆಯನ್ನಿಡಿ. ಅನಿರೀಕ್ಷಿತ ಕಷ್ಟನಷ್ಟ ಸಂಭವಿಸಬಹುದು.
ಕನ್ಯಾ: ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ನೀವು ಬಿಡುವುದಿಲ್ಲ.

ತುಲಾ: ಬುದ್ಧಿವಂತಿಕೆಯಿಂದ ನೀವು ಕೆಲಸದಲ್ಲಿ ಯಶಸ್ಸು ಸಾಧಿಸುವಲ್ಲಿ ಯಶಸ್ವಿಯಾಗುವಿರಿ.
ವೃಶ್ಚಿಕ: ಪ್ರಯತ್ನಗಳು ಫಲ ನೀಡುತ್ತವೆ ಮತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಧನುಸ್ಸು: ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ದೀರ್ಘ ಪ್ರಯಾಣ ಮಾಡುವಿರಿ.

ಮಕರ: ವ್ಯಾಪಾರ-ವ್ಯವಹಾರದಲ್ಲಿ ಕೆಲವು ಅನಗತ್ಯ ಒತ್ತಡಗಳು ಉಂಟಾಗಬಹುದು.
ಕುಂಭ: ಮಾನಸಿಕ ಆಲಸ್ಯ ಕೊನೆಗೊಳ್ಳುತ್ತದೆ ಮತ್ತು ಎಲ್ಲಾ ಕಡೆಯಿಂದ ಒಳ್ಳೆಯ ಸುದ್ದಿ ಕೇಳುವಿರಿ.
ಮೀನ: ಇತರರನ್ನು ನಿಮ್ಮ ಕಡೆಗೆ ಆಕರ್ಷಿಸುತ್ತೀರಿ. ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಿ.