ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(15-01-2023)

Social Share

ನಿತ್ಯ ನೀತಿ : ಯಾರೊಬ್ಬರಿಗಾಗಿಯೂ ಅಳಬೇಡಿ. ಅವರು ನಿಮ್ಮ ಕಣ್ಣೀರಿಗೆ ಯೋಗ್ಯರಲ್ಲ. ಯಾರು ನಿಮ್ಮ ಕಣ್ಣೀರಿಗೆ ಯೋಗ್ಯರೋ ಅವರು ನಿಮ್ಮನ್ನು ಅಳಲು ಬಿಡುವುದಿಲ್ಲ.
ಪಂಚಾಂಗ : ಭಾನುವಾರ, 15-01-2023
ಶುಭಕೃತ್ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಚಿತ್ತಾ / ಯೋಗ: ಸುಕರ್ಮ /ಕರಣ: ಬಾಲವ
ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.12
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ಇಂದಿನ ರಾಶಿಭವಿಷ್ಯ :
ಮೇಷ:
ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ ಹೆಚ್ಚಾಗುವುದು. ಆರೋಗ್ಯದ ಕಡೆ ಗಮನ ಹರಿಸಿ.
ವೃಷಭ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಗೆಳೆಯರಿಂದ ಸಹಕಾರ ಸಿಗಲಿದೆ.
ಮಿಥುನ: ಆಹಾರದ ವಿಷಯದಲ್ಲಿ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ.

ಕಟಕ: ಹಿರಿಯರೊಂದಿಗೆ ಮನಸ್ತಾಪ ಉಂಟಾಗಬಹುದು. ಸಹನೆಯಿಂದ ವರ್ತಿಸಿ.
ಸಿಂಹ: ಬಂಧುಗಳೊಂದಿಗೆ ವೈಮನಸ್ಸು ಉಂಟಾಗದಂತೆ ನೋಡಿಕೊಳ್ಳುವುದು ಒಳಿತು.
ಕನ್ಯಾ: ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಯಾವುದೇ ಸಮಯದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದಿರಿ.

ತುಲಾ: ಕಾರ್ಯಸಾಧನೆಗೆ ಅಕ್ಕಪಕ್ಕದವರ ಅಡ್ಡಗಾಲು ಅಥವಾ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆಯಾಗಲಿದೆ.
ವೃಶ್ಚಿಕ: ಹತ್ತಿರದ ಸ್ನೇಹಿತರಿಂದಲೇ ನಿಮ್ಮ ಬಗ್ಗೆ ಕೆಟ್ಟ ಮಾತುಗಳು ಕೇಳಿಬರಲಿವೆ.
ಧನುಸ್ಸು: ಹಿಂಜರಿಕೆ ಮತ್ತು ಭಯದ ಸ್ವಭಾವ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.

ಮಕರ: ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗಲಿದೆ. ಅಗತ್ಯ ವಸ್ತುಗಳನ್ನು ಖರೀದಿಸುವಿರಿ.
ಕುಂಭ: ಷೇರು ಮಾರುಕಟ್ಟೆ ಹಾಗೂ ಕಮಿಷನ್ ವ್ಯಾಪಾರಕ್ಕೆ ಸಂಬಂಸಿದ ವೃತ್ತಿಯಲ್ಲಿರುವವರಿಗೆ ನಷ್ಟವಾಗಲಿದೆ.
ಮೀನ: ಕಚೇರಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಒತ್ತಡ ಹೆಚ್ಚಾಗಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ.

#Horoscope, #KannadaHoroscope, #DailyHoroscope, #TodayHoroscope, #EesanjeHoroscope, #ಪಂಚಾಂಗ #ರಾಶಿಭವಿಷ್ಯ,

Articles You Might Like

Share This Article