ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-02-2022)

Social Share

ನಿತ್ಯ ನೀತಿ :ಔಷಧದಿಂದ ಆರೋಗ್ಯ ಅನ್ನೋದು ಅರ್ಧ ಸತ್ಯ ಮಾತ್ರ. ನಗು, ಶಾಂತಿಯಿಂದ ಕೂಡಿದ ಮನಸ್ಥಿತಿಯೂ ಅಷ್ಟೇ ಮುಖ್ಯ.

# ಪಂಚಾಂಗ : ಮಂಗಳವಾರ , 15-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಶಿಶಿರ ಋತು | ಮಾಘ  ಮಾಸ | ಶುಕ್ಲ ಪಕ್ಷ | ತಿಥಿ: ಚತುರ್ದಶಿ| ನಕ್ಷತ್ರ: ಪುಷ್ಯ| ಮಳೆ ನಕ್ಷತ್ರ: ಧನಿಷ್ಠ
* ಸೂರ್ಯೋದಯ : ಬೆ.06.42
* ಸೂರ್ಯಾಸ್ತ : 06.26
* ರಾಹುಕಾಲ : 3.00-4.30
* ಯಮಗಂಡ ಕಾಲ :9.00-10.30
* ಗುಳಿಕ ಕಾಲ : 12.00-1.30
# ರಾಶಿಭವಿಷ್ಯ 
ಮೇಷ: ಸಮಸ್ಯೆಗಳಿಗೆ ಶಾಂತಿ ಮತ್ತು ಸಭ್ಯತೆಯಿಂದ ಪರಿಹಾರಗಳನ್ನು ಕಂಡುಕೊಳ್ಳುವುದು ಒಳಿತು.
ವೃಷಭ: ಹೊಸ ಉದ್ಯಮ ಪ್ರಾರಂಭಿಸಲು ಬಯಸುವವರಿಗೆ ಉತ್ತಮ ಯಶಸ್ಸು ಸಿಗಲಿದೆ.
ಮಿಥುನ: ವೃತ್ತಿ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ.
ಕಟಕ: ಸಂಗಾತಿಯೊಂದಿಗೆ ಚರ್ಚಿಸಿ ಹಣಕಾಸಿನ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಿ.
ಸಿಂಹ: ಧರ್ಮ ಕಾರ್ಯ ಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ ಇರಲಿ.
ಕನ್ಯಾ: ಕುಟುಂಬ ಸದಸ್ಯರಿಂದ ಆರ್ಥಿಕ ಸಹಾಯ ಪಡೆಯಬಹುದು.
ತುಲಾ: ಅಪರಿಚಿತ ವ್ಯಕ್ತಿಯ ಸಹಾಯದಿಂದ ಪ್ರಮುಖ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳುವಿರಿ.
ವೃಶ್ಚಿಕ: ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕವಾಗಿ ಮಾಡುವುದು ಸೂಕ್ತ.
ಧನುಸ್ಸು: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆದುಕೊಳ್ಳಿ.
ಮಕರ: ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ಸಿಗಲಿದೆ.
ಕುಂಭ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಉತ್ತಮ.
ಮೀನ: ಉದ್ಯೋಗ ಹುಡುಕುತ್ತಿದ್ದವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ.

Articles You Might Like

Share This Article