ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-10-2022)

Social Share

ನಿತ್ಯ ನೀತಿ : ಬಾಡಿಗೆ ಕಟ್ಟುವಾಗ ಸ್ವಂತ ಮನೆಯ ಬೆಲೆ ಹಸಿವಾದಾಗ ಅನ್ನದ ಬೆಲೆ ಕೆಲಸ ಇಲ್ಲದಿರುವಾಗ ಹಣದ ಬೆಲೆ ಬಿಟ್ಟು ಹೋದಾಗ ಪ್ರೇಮದ ಬೆಲೆ ದೂರವಾದಾಗ ಮನುಷ್ಯನ ಬೆಲೆ ಜಾಗ್ರತೆ ಇಲ್ಲದಿರುವಾಗ
ಜೀವನದ ಬೆಲೆ ತಿಳಿಯುತ್ತದೆ.

ಪಂಚಾಂಗ : ಶನಿವಾರ , 15-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಮೃಗಶಿರಾ / ಮಳೆ ನಕ್ಷತ್ರ: ಚಿತ್ತಾ
ಸೂರ್ಯೋದಯ : ಬೆ.06.10
ಸೂರ್ಯಾಸ್ತ : 06.01
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ಮೇಷ: ನೂತನ ಯೋಜನೆ ಪ್ರಾರಂಭಿಸಲು ಹಣಕಾಸಿನ ಕೊರತೆ ಇರುವುದಿಲ್ಲ.
ವೃಷಭ: ಆಸ್ತಿ, ಅಪಾರ್ಟ್ಮೆಂಟ್ ಖರೀದಿಯಲ್ಲಿ ಅಕ ಹಣ ಹೂಡಿಕೆ ಮಾಡುವಿರಿ.
ಮಿಥುನ: ಹಳೆ ವಾಹನ ಖರೀದಿಸುವುದರಿಂದ ರಿಪೇರಿ ವೆಚ್ಚ ಹೆಚ್ಚಾಗಬಹುದು.
ಕಟಕ: ಆತ್ಮೀಯರ ಸಹಾಯ ಸಿಗಲಿದೆ. ವಸ್ತ್ರ ವಿನ್ಯಾಸಕರಿಗೆ ಅಕ ಲಾಭ ದೊರೆಯಲಿದೆ.
ಸಿಂಹ: ಸರ್ಕಾರದಿಂದ ಆಗಬೇಕಾದ ಕೆಲಸಗಳು ಪ್ರಭಾವಿಗಳ ಮಧ್ಯಸ್ಥಿಕೆ ಯಿಂದ ನಡೆಯಲಿವೆ.
ಕನ್ಯಾ: ಸದ್ಯಕ್ಕೆ ಕೆಲಸದ ಬದಲಾವಣೆ ಬೇಡ. ಆಹಾರ ಪದ್ಧತಿಯಲ್ಲಿ ಸರಿಯಾದ ನಿಯಮ ಪಾಲಿಸಿ.
ತುಲಾ: ಮನೆ ಬಗ್ಗೆ ಉದಾ ಸೀನ ತೋರದೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ.
ವೃಶ್ಚಿಕ: ಉನ್ನತ ಸ್ಥಾನಮಾನ ದೊರೆಯಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಧನುಸ್ಸು: ಮಕ್ಕಳ ಉನ್ನತ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಮಾಡದರಿರುವುದು ಒಳಿತು.
ಮಕರ: ಸಣ್ಣ ಪುಟ್ಟ ಅಡಚಣೆಗಳು ಕೆಲಸ-ಕಾರ್ಯ ಗಳಿಗೆ ಅಡ್ಡಿಯನ್ನುಂಟುಮಾಡಲಿವೆ.
ಕುಂಭ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವನ್ನು ಹೊಂದುತ್ತೀರಿ.
ಮೀನ: ಹಣದ ಒಳಹರಿವು ಉತ್ತಮವಾಗಿರುತ್ತದೆ.

Articles You Might Like

Share This Article