ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-01-2022)

Social Share

ನಿತ್ಯ ನೀತಿ : ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗದಿದ್ದರೆ ಮತ್ತೊಮ್ಮೆ ಪ್ರಯತ್ನಿಸು ಯಶಸ್ಸು ಒಲಿಯುತ್ತದೆ.
ಪಂಚಾಂಗ: ಭಾನುವಾರ , 16-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಶುಕ್ಲ ಪಕ್ಷ | ತಿಥಿ: ಚತುರ್ದಶಿ | ನಕ್ಷತ್ರ: ಆದ್ರ್ರಾ| ಮಳೆ ನಕ್ಷತ್ರ: ಉತ್ತರಾಷಾಢ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.13
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30
#ಇಂದಿನ ಭವಿಷ್ಯ :
ಮೇಷ: ಹೆಚ್ಚು ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. ಯಾವುದೋ ವಿಷಯದಲ್ಲಿ ತಂದೆಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.
ವೃಷಭ: ದೀರ್ಘಕಾಲದಿಂದ ಉಳಿದುಕೊಂಡಿರುವ ಸಮಸ್ಯೆಗಳನ್ನುಪರಿಹರಿಸಲು ಪ್ರಯತ್ನಿಸುವುದರಿಂದ ಈ ದಿನ ಹೆಚ್ಚು ಒತ್ತಡದಿಂದ ಕೂಡಿರುತ್ತದೆ.
ಮಿಥುನ: ಸಂಗಾತಿಯಿಂದ ಉಡುಗೊರೆ ಸಿಗಲಿದೆ. ಆರ್ಥಿಕವಾಗಿ ಲಾಭದಾಯಕ ದಿನವಾಗಿದೆ.
ಕಟಕ: ತಾಯಿಯ ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ.
ಸಿಂಹ: ಕಿರಿಯ ಸಹೋದರ ರೊಂದಿಗೆ ಹೆಚ್ಚು ಸಮಯ ಕಳೆಯಲು ಯತ್ನಿಸುವಿರಿ.
ಕನ್ಯಾ: ಯಾವುದೇ ಸಮಸ್ಯೆ ಗಳನ್ನು ತಾಳ್ಮೆಯಿಂದ ಬಗೆ ಹರಿಸಿಕೊಳ್ಳುವುದು ಒಳಿತು.
ತುಲಾ: ಕುಟುಂಬ ಮತ್ತು ಸ್ನೇಹಿತರಿಗಾಗಿ ಅನಿರೀಕ್ಷಿತ ವೆಚ್ಚಗಳು ಉಂಟಾಗುತ್ತವೆ. ಸಾಲದ ಸಮಸ್ಯೆ ಎದುರಿಸಲು ಇದು ಉತ್ತಮ ದಿನವಲ್ಲ.
ವೃಶ್ಚಿಕ: ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡು ವವರಿಗೆ ಉತ್ತಮ ಯಶಸ್ಸು ಸಿಗಲಿದೆ.
ಧನುಸ್ಸು: ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ದೀರ್ಘಕಾಲದಿಂದ ಕಳೆದುಕೊಂಡಿರುವ ಸಾಮರಸ್ಯವನ್ನು ಮರುಸ್ಥಾಪಿಸಿ.
ಮಕರ: ನಿಮ್ಮ ಹಣದ ಬಗ್ಗೆ ಅಸಡ್ಡೆ ಹೊಂದಿದ್ದರೆ, ಉಳಿತಾಯದ ಮೇಲೆ ಪರಿಣಾಮ ಬೀರಬಹುದು.
ಕುಂಭ: ಉದ್ಯಮಿಗಳ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಹಿರಿಯರೊಂದಿಗಿನ ಸಂಬಂಧಗಳು ಉತ್ತಮವಾಗಿರುತ್ತವೆ
ಮೀನ: ಸಮಸ್ಯೆಗಳ ಪರಿಹಾರಕ್ಕೆ ಹೊಸ ಮಾರ್ಗ ಗಳು ಕಾಣಲಿವೆ. ದೂರ ಪ್ರಯಾಣ ಮಾಡದಿರಿ.

Articles You Might Like

Share This Article